ರಾಮ ಭಂಟನಿಗೆ ಫಲ-ಪುಷ್ಪಗಳಿಂದ ಅಲಂಕಾರ

12knk1
ಹನುಮ ಜಯಂತಿ ನಿಮಿತ್ತ ಕನಕಗಿರಿಯ ಆನೆಗೊಂದಿ ಅಗಸೆಯ ಹನುಮಪ್ಪನಿಗೆ ಶನಿವಾರ ದ್ರಾಕ್ಷಿ ಹಣ್ಣು, ಎಲೆ ಚಟ್ಟಿನಿಂದ ಪೂಜೆ ಸಲ್ಲಿಸಲಾಯಿತು.
Published on

ಕನಕಗಿರಿ: ಹನುಮ ಜಯಂತಿ ನಿಮಿತ್ತ ಪಟ್ಟಣದ ಹನುಮ ದೇವಸ್ಥಾನಗಳಲ್ಲಿ ಶನಿವಾರ ವಿಶೇಷ ಪೂಜೆ ನಡೆಯಿತು. ಐತಿಹಾಸಿಕ ಆನೆಗೊಂದಿ ಅಗಸೆ ಹನುಮಪ್ಪ ದೇವಸ್ಥಾನದಲ್ಲಿ ದೇವರನ್ನು ದ್ರಾಕ್ಷಿ ಹಣ್ಣುಗಳಿಂದ ಸಿಂಗರಿಸಲಾಗಿತ್ತು.

ತೊಂಡಿತೇರಪ್ಪ ದೇವಸ್ಥಾನದಲ್ಲಿ ಶ್ರೀಸ್ವಾಮಿ ಮೂರ್ತಿಗೆ ಕಿರೀಟ ಧಾರಣೆ ಮಾಡಿ, ಎಲೆ ಚಟ್ಟು ಕಟ್ಟಿ ವಿಶೇಷ ಪೂಜೆ ಸಲ್ಲಿಸಲಾಯಿತು. ಆಸ್ಪತ್ರೆಯ ಕ್ವಾಟ್ರಸ್‌ನಲ್ಲಿನ ಗಿಡ್ಡ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾನಕ ಹಂಚಲಾಯಿತು.

ಕನಕಾಚಲಪತಿ ದೇವಸ್ಥಾನದಲ್ಲಿ ದವನದ ಹುಣ್ಣಿಮೆ ನಿಮಿತ್ತ ಎಂದಿನಂತೆ ಹುಣ್ಣಿಮೆ ಪೂಜೆ ಹಾಗೂ ಸತ್ಯನಾರಾಯಣ ಪೂಜೆ ನೆರವೇರಿತು. ಕರಡಿಗುಡ್ಡದ ಆಂಜನೇಯ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ತೀರ್ಥ ಪ್ರಸಾದ, ಮಂಗಳಾರತಿ, ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net