ರಾಮ ಮಂದಿರಕ್ಕೆ ರಂಭಾಪುರಿ ಶ್ರೀ ದೇಣಿಗೆ

web 4 (1)
Published on

ಬಾಳೆಹೊನ್ನೂರು: ಶ್ರೀ ರಂಭಾಪುರಿ ಪೀಠಕ್ಕೆ ಸೋಮವಾರ ಭೇಟಿ ನೀಡಿದ್ದ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಪದಾಧಿಕಾರಿಗಳಿಗೆ ಡಾ. ವೀರಸೋಮೇಶ್ವರ ಜಗದ್ಗುರುಗಳು ಶ್ರೀರಾಮ ಮಂದಿರ ನಿರ್ವಣಕ್ಕೆ ಚೆಕ್ ಮೂಲಕ ದೇಣಿಗೆ ಹಸ್ತಾಂತರಿಸಿದರು.

ವಿಎಚ್​ಪಿ ಜಿಲ್ಲಾ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಮ ಮಂದಿರ ನಿರ್ವಣಕ್ಕಾಗಿ ನಡೆಯುತ್ತಿರುವ ದೇಣಿಗೆ ಸಂಗ್ರಹಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾನುವಾರ ಮಹಾಸಂಗ್ರಹ ಅಭಿಯಾನದಲ್ಲಿ ಒಂದೇ ದಿನ 6,500ಕ್ಕೂ ಅಧಿಕ ಮನೆಗಳನ್ನು ಸಂರ್ಪಸಲಾಗಿದೆ. ಭಕ್ತರು ಸಂತಸದಿಂದ ದೇಣಿಗೆ ಕೂಪನ್ ಸ್ವೀಕರಿಸಿ ಸಹಕರಿಸಿದ್ದಾರೆ. ರಾಮ ಮಂದಿರವು ರಾಷ್ಟ್ರ ಮಂದಿರವಾಗಬೇಕೆಂಬ ಸಂಘಟನೆಯ ಕನಸು ನನಸಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net