

ಹುಬ್ಬಳ್ಳಿ: ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಇಲ್ಲಿಯ ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ ಅವರ ನೇತೃತ್ವದಲ್ಲಿ ‘ರಾಮ ರಾಜ್ಯ’ ವಾಕ್ಯವನ್ನು ಭಾಗವಾ ಬಣ್ಣದಿಂದ ಭಾನುವಾರ ಪ್ರತಿ ಮನೆಯ ದ್ವಾರದಲ್ಲಿ ಹಚ್ಚಲಾಯಿತು.
ಶ್ರೀರಾಮ ಮಂದಿರವಾಯಿತು. ಶ್ರೀರಾಮ ಮೂರ್ತಿಯೂ ಪ್ರತಿಷ್ಠಾಪನೆಯಾಗಲಿದೆ. ಈ ಹಿನ್ನೆಲೆಯಲ್ಲಿ ರಾಮರಾಜ್ಯ ಆಗಬೇಕೆಂಬ ಕಲ್ಪನೆಯಿಟ್ಟುಕೊಂಡು ಈ ಅಭಿಯಾನ ಆರಂಭಿಸಲಾಗಿದೆ ಎಂದು ವೆಂಕಟೇಶ ಕಾಟವೆ ವಿವರಿಸಿದರು.
ರಾಜು ಜರತಾರಘರ, ಅನಿಲ್ ಜಡಿ, ವಿಠ್ಠಲಸಾ ಬದ್ಧಿ, ಮಿಥುನ ಚವ್ಹಾಣ, ಪ್ರಕಾಶ ಖೋಡೆ, ಎಸ್.ಆರ್. ಜತೂರಿ, ನಾಗೇಂದ್ರ ಸೋಲಂಕಿ, ನಾಗೇಂದ್ರ ಇರಕಲ್, ರಂಗನಾಥ ಜರತಾರಘರ, ವಿಠ್ಠಲಸಾ ಬಾಕಳೆ, ಸುನಿಲ್ ಅಥಣಿ, ಈಸು ಗುಡಿ, ಅಕ್ಷಯ ಖೋಡೆ, ರಾಹುಲ ಜರತಾರಘರ, ಸಂಜು ಸೊಳಂಕಿ, ವೆಂಕಟೇಶ ಜಡಿ, ಶ್ರೀಧರ ಬೋರೆ, ರಾಕೇಶ ಜಡಿ, ವಿವೇಕ ಗುಡಿ, ಮಾಧವ ಖೋಡೆ, ಸಿದ್ದಾರ್ಥ ಜರತಾರಘರ, ವಿನಾಯಕ ಹಬೀಬಿ, ಸನಾತನ ಹಿಂದೂ ಧ್ವಜ ಸಮಿತಿ ಸದಸ್ಯರಾದ ನಾರಾಯಣ ಹಬೀಬ, ಅಮೃತ ಪವಾರ, ಅಜಯ ಪೂಜಾರಿ, ಶ್ರೀಕಾಂತ ಡಮಾಮಗರ, ಶ್ರೀಧರ ಕಾಟವೆ, ಪುನೀತ ಕಬಾಡೆ, ಸಚಿನ ಕಾಟವೆ, ವಿಜಯ ಪವಾರ, ವಿಜಯ ಕಲ್ಬುರ್ಗಿ, ರಾಘು ಜಿತೂರಿ, ಶ್ರೀ ಶಿವಶಕ್ತಿ ಯುವ ಸಂಘ ದಿವಟೆ ಓಣಿಯ ಪದಾಧಿಕಾರಿಗಳು ಇದ್ದರು.