ಮಂಡಲ ಕಾಂಗ್ರೆಸ್‌ನಿಂದ ಐ.ರಾಮ ರೈ ಪುಣ್ಯಸ್ಮರಣೆ

Bdk_Rama Rai
Published on

ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಮಂಡಲ ಕಚೇರಿಯಲ್ಲಿ ಮಾಜಿ ಸಂಸದ ದಿ.ಐ.ರಾಮ ರೈ ಅವರ 14ನೇ ಪುಣ್ಯಸ್ಮರಣೆ ಸೋಮವಾರ ನಡೆಯಿತು.

ಹಿರಿಯ ಕಾಂಗ್ರೆಸ್ ನೇತಾರ ಪಿ.ಜಿ.ಚಂದ್ರಹಾಸ ರೈ ಪುಷ್ಪಾರ್ಚನೆಗೈದರು. ಮಂಡಲ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ನಾರಾಯಣ ಮಣಿಯಾಣಿ ನೀರ್ಚಾಲು, ಜಗನಾಥ ರೈ ಪೆರಡಾಲ ಗುತ್ತು, ತಿರುಪತಿ ಕುಮಾರ್ ಭಟ್, ಖಾದರ್ ಮಾನ್ಯ, ಕುಮಾರ್ ಭಟ್ ಶಾಫಿ, ಲೋಹಿ ಕುಟ್ಟಿಮೂಲೆ, ಶಾಫಿ ಗೋಳಿಯಡ್ಕ, ವಾಮನ ಚುಕ್ಕಿನಡ್ಕ, ರಾಮ ಗೋಳಿಯಡ್ಕ, ಸತೀಶ್, ಜೋನಿ ಕ್ರಾಸ್ತ, ಬಲತೀಶ್ ದರ್ಬೆತಡ್ಕ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net