ಜಿಲ್ಲೆಯ ವಿವಿಧೆಡೆ ರಾಮನವಮಿ ಆಚರಣೆ

udp-7-rama 1
Published on

ಉಡುಪಿ: ಜಿಲ್ಲೆಯ ವಿವಿಧ ದೇವಸ್ಥಾನ ಮತ್ತು ಭಜನಾಮಂದಿರದಲ್ಲಿ ರಾಮನವಮಿ ಉತ್ಸವವನ್ನು ಭಾನುವಾರ ವೈಭವದಿಂದ ಆಚರಿಸಲಾಯಿತು.

ಸಾಲಿಗ್ರಾಮ ಶ್ರೀರಾಮ ಸೇವಾ ಸಮಿತಿಯ ಶ್ರೀರಾಮ ಮಂದಿರದಲ್ಲಿ 35ನೇ ವರ್ಷದ ರಾಮ ನವಮಿ ಮಹೋತ್ಸವದಲ್ಲಿ ಬೆಳಗ್ಗೆ ಸುಂದರಕಾಂಡ ಪಾರಾಯಣ, ಸಾಯಂಕಾಲ ವಿಷ್ಣು ಸಹಸ್ರನಾಮ, ಶ್ರೀರಾಮ ರಕ್ಷಾಸ್ತೋತ್ರ, ಭಗವತ್​ಗೀತೆ ಪಾರಾಯಣ, ಸಂಜೆ ವಸಂತ ಪೂಜೆ, ಪನಿವಾರ ವಿತರಣೆ ನಡೆಯಿತು. 6ರಿಂದ ವಿದ್ವಾನ್​ ಅಶೋಕ ಆಚಾರ್ಯ ಮತ್ತು ತಂಡದವರಿಂದ ಭಜನ್​ ಸಂಧ್ಯಾ ನಡೆಯಿತು. ನೂರಾರು ಭಕ್ತರು ಆಗಮಿಸಿ ಶ್ರೀರಾಮಚಂದ್ರನಿಗೆ ವಿಶೇಷ ಪೂಜಾ ಸೇವೆ ಸಲ್ಲಿಸಿದರು.

ಮಲ್ಪೆ ಜಿ.ಎಸ್​.ಬಿ ಸಮಾಜ ಶ್ರೀ ರಾಮ ಮಂದಿರ, ಶ್ರೀ ರಾಮ ದೇವರ ಪ್ರತಿಷ್ಠಾಪನೆ ರಜತ ಮೊಹೋತ್ಸವ ಆಚರಣೆ ಹಾಗೂ ಶ್ರೀ ರಾಮ ನವಮಿ ಮಹೋತ್ಸವ ಆಚರಣೆ ನಡೆಯಿತು. ಶ್ರೀರಾಮಚಂದ್ರ ದೇವರಿಗೆ ಪಂಚಾಮೃತ ಅಭಿಷೇಕ, ಶತ ಕಲಶಾಭಿಷೇಕ, ಕನಕಾಭಿಷೆೇಕ, ಗಂಗಾಭಿಷೇಕ , ಪಲಾಭಿಷೆೇಕ ಹಾಗೂ ಸಾನಿಧ್ಯ ಹವನ, ಶ್ರೀದೇವರಿಗೆ ವಿಶೇಷ ಅಲಂಕಾರ ಹಾಗೂ ಶ್ರೀರಾಮ ದೇವರಿಗೆ ತೊಟ್ಟಿಲು ಸೇವೆ, ಭಜನಾ ಕಾರ್ಯಕ್ರಮ, ಪಲ್ಲ ಪೂಜೆ, ಮಹಾ ಪೂಜೆ ಬಳಿಕ ಮಹಾ ಸಮಾರಾಧನೆ ಜರಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net