ಮನುಷ್ಯನಾಗಿ ಬದುಕಿ ಆದರ್ಶವಾದ ಶ್ರೀರಾಮ : ಸುಬ್ರಹ್ಮಣ್ಯಶ್ರೀ ಆಶೀರ್ವಚನ

New Project (7)
Published on

ಸುಬ್ರಹ್ಮಣ್ಯ: ಭಗವಂತನ ಅನೇಕ ಅವತಾರಗಳಲ್ಲಿ ರಾಮಾವತಾರ ವಿಶೇಷವಾದುದು. ರಾಮನು ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆದು ಮಾದರಿ ಜೀವನವನ್ನು ನಮಗೆ ತೋರಿಸಿಕೊಟ್ಟವನು. ರಾಮ ಅನ್ನುವುದು ಮನುಷ್ಯನಾಗಿ ಬದುಕಿದ ದೇವರ ಆದರ್ಶ ರೂಪ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಶ್ರೀ ಸುಬ್ರಹ್ಮಣ್ಯ ಮಠ ಮತ್ತು ದಾಸ ನಿವಾಸ ಕಲಾ ವೇದಿಕೆ ಸಹಯೋಗದಲ್ಲಿ ರಾಮನವಮಿ ಪ್ರಯುಕ್ತ ಶ್ರೀ ಮಠದಲ್ಲಿ ರಾಮಗಾನೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮಠದ ದಿವಾನ ಸುದರ್ಶನ ಜೋಯೀಸ, ಕಲಾವಿದ ಕೆ.ಯಜ್ಞೇಶ್ ಆಚಾರ್, ನಿವೃತ್ತ ಉಪನ್ಯಾಸಕ ಡಾ.ಕೆ.ಎಸ್.ಎನ್.ಉಡುಪ, ನಿವೃತ್ತ ಮುಖ್ಯಶಿಕ್ಷಕ ಶ್ರೀಕೃಷ್ಣ ಶರ್ಮ, ಪ್ರಮುಖರಾದ ವೇಣುಗೋಪಾಲ ಶಾಸ್ತ್ರಿ ರಾವೇಂದ್ರ ಆಚಾರ್, ಗುರುಪ್ರಸಾದ್ ಮುಚ್ಚಿಂತ್ತಾಯ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net