ಪ್ರಧಾನಿ ಮೋದಿಯಿಂದ ರಾಮ ರಾಜ್ಯ ಸ್ಥಾಪನೆ

ಹರತಲೆ ಗ್ರಾಮದಲ್ಲಿ ಆಯೋಜಿಸಿದ್ದ  ವಾಲ್ಮೀಕಿ ಜಯಂತಿಯನ್ನು ಮಾಜಿ ಶಾಸಕ ಬಿ.ಹರ್ಷವರ್ಧನ್ ಉದ್ಘಾಟಿಸಿದರು. ಎಲ್.ಆರ್.ಮಹದೇವಸ್ವಾಮಿ, ಬಂಗಾರ ಸ್ವಾಮಿ, ಚಿಕ್ಕರಂಗನಾಯಕ, ಕೆಂಡಗಣ್ಣಪ್ಪ, ಸಿದ್ದರಾಜು, ಮಹೇಶ್, ಹುಲ್ಲಳ್ಳಿ ಶಿವಣ್ಣ, ಮಸಗೆ ರಾಜಣ್ಣ ಇದ್ದರು.
ಹರತಲೆ ಗ್ರಾಮದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯನ್ನು ಮಾಜಿ ಶಾಸಕ ಬಿ.ಹರ್ಷವರ್ಧನ್ ಉದ್ಘಾಟಿಸಿದರು. ಎಲ್.ಆರ್.ಮಹದೇವಸ್ವಾಮಿ, ಬಂಗಾರ ಸ್ವಾಮಿ, ಚಿಕ್ಕರಂಗನಾಯಕ, ಕೆಂಡಗಣ್ಣಪ್ಪ, ಸಿದ್ದರಾಜು, ಮಹೇಶ್, ಹುಲ್ಲಳ್ಳಿ ಶಿವಣ್ಣ, ಮಸಗೆ ರಾಜಣ್ಣ ಇದ್ದರು.
Published on

ನಂಜನಗೂಡು: ಕೊರೋನಾ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಲಾಯಿತಾದರೂ ಯಾರೂ ಬೆನ್ನು ತಟ್ಟಲಿಲ್ಲ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಹರತಲೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಇಲ್ಲದಿದ್ದರೆ ನಾನು ಎರಡು ಬಾರಿ ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಆ ಸಮುದಾಯಕ್ಕೆ ಸೇರಿದ ಜಿ.ಪರಮೇಶ್ವರ್‌ಗೆ ಚುನಾವಣೆಯಲ್ಲಿ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಂದ್ರಕ್ಕೆ ಕಳುಹಿಸುವವರೆಗೂ ಬಿಡಲಿಲ್ಲ. ಮಹರ್ಷಿ ವಾಲ್ಮೀಕಿ ಆದರ್ಶದಂತೆ ಮೋದಿ ಅವರು ಅಯೋಧ್ಯೆಯಲ್ಲಿ ಇಂದು ರಾಮ ಮಂದಿರ ಸ್ಥಾಪನೆ ಮಾಡಿದ್ದು, ರಾಮ ರಾಜ್ಯ ಮಾಡಲು ಹೊರಟಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕರಂಗ ನಾಯಕ ಮಾತನಾಡಿದರು. ನಂತರ ಅಲಂಕೃತಗೊಂಡ ವಾಹನದಲ್ಲಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಯನ್ನು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮುಖಂಡರಾದ ಬಂಗಾರ ಸ್ವಾಮಿ, ಚಿಕ್ಕರಂಗನಾಯಕ, ಕೆಂಡಗಣ್ಣಪ್ಪ, ಸಿದ್ದರಾಜು, ಮಹೇಶ್, ಹುಲ್ಲಳ್ಳಿ ಶಿವಣ್ಣ, ಮಸಗೆ ರಾಜಣ್ಣ, ಲತಾ ಮುದ್ದು ಮೋಹನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net