

ಹುಬ್ಬಳ್ಳಿ: ಶ್ರೀರಾಮನ ಭಕ್ತಿಯೇ ಅಂಥದ್ದು. ಧರ್ಮ, ಜಾತಿ ಎಲ್ಲವನ್ನೂ ಮೀರಿ ಸೆಳೆಯುವಾತ ರಾಮ. ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಮುಸ್ಲಿಂ ಧಮಿರ್ಯರು ಸಹ ರಾಮೋತ್ಸವ ಮಾಡಿ ಸಂಭ್ರಮಿಸಿರುವುದು ವಿಶೇಷವಾಗಿದೆ.
ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಂದರ್ಭದಲ್ಲಿ ಹಳ್ಯಾಳ ಗ್ರಾಮದ ಮಸೀದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಸ್ಲಿಂಮರು ಭಾವೈಕ್ಯ ಮೆರೆದಿದ್ದಾರೆ.
ಗ್ರಾಮದ ಎರಡು ಮಸೀದಿ ಮತ್ತು ಸೈಯದ್ ಅಲಿ ದರ್ಗಾದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಒಂದು ಮಸೀದಿ ಒಳಗಡೆ ಶ್ರೀರಾಮದೇವರ ಫೋಟೋ ಇಟ್ಟು ಪೂಜೆ ಮಾಡಿದರು.
ಇನ್ನೊಂದೆಡೆ ಮಸೀದಿಯ ಆವರಣದಲ್ಲಿ ಶ್ರೀರಾಮನ ಭಾವಚಿತ್ರ ಇಟ್ಟು ಪೂಜೆಗೈದರು. ಹಳ್ಯಾಳ ಗ್ರಾಮಸ್ಥರು ಸೇರಿ ಮಧ್ಯಾಹ್ನ ಅನ್ನ ಸಂತರ್ಪಣೆ ಮಾಡಿ ಸಂಭ್ರಮಪಟ್ಟರು.
ಮುಸ್ಲಿಂರು ಸೇರಿ ಎಲ್ಲ ಯುವಕರು ಕೇಸರಿ ಬಟ್ಟೆ ತೊಟ್ಟು, ಧ್ವಜ ಹಿಡಿದು ಶ್ರೀರಾಮನಿಗೆ ಭಕ್ತಿ ಸರ್ಮಪಿಸಿದರು.