ಆದ್ದೂರಿಯಾಗಿ ರಾಮನವಮಿ ಆಚರಣೆ *ವಿವಿಧೆಡೆ ಶ್ರೀರಾಮನಿಗೆ ವಿಶೇಷ ಪೂಜೆ

ramanavami
ramanavami
Published on

ರಾಯಚೂರು ಆದರ್ಶ ಪುರುಷÀ ಶ್ರೀರಾಮನವಮಿಯನ್ನು ನಗರ ಸೇರಿದಂತೆ ಜಿಲ್ಲಾಧ್ಯಂತ ನಾನಾ ರಾಮ ದೇವಸ್ಥಾನದಲ್ಲಿ ಭಾನುವಾರ ಸಂಭ್ರಮದಿAದ ಆಚರಣೆ ಮಾಡಿದರು.

ನಗರದ ರೈಲ್ವೆ ನಿಲ್ದಾಣದ ಹತ್ತಿರದ ರಾಮಮಂದಿರ, ಕೋದಂಡ ರಾಮ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ನೆರೆದಿದ್ದರು.ನಂತರ ಶ್ರೀರಾಮನ ಕಲ್ಯಾಣೋತ್ಸವ ನೆರವೇರಿಸಲಾಯಿತು. ವಿಶೇಷÀ ಪೂಜೆ,ಪುಷ್ಪಾಲಂಕಾರ ಸಲ್ಲಿಸಲಾಯಿತು. ವಿವಿಧೆಡೆಯಿಂದ ಬಂದಿದ್ದ ಭಕ್ತರು ಅಲಂಕÊತ ಶ್ರೀರಾಮನ ದರ್ಶನ ಪಡೆದು ಪುನೀತರಾದರು. ಶ್ರೀರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ಇರುವ ಭಾವಚಿತ್ರವನ್ನಿಟ್ಟು

ಅಲಂಕಾರ ಮಾಡಲಾಗಿತ್ತು. ನವಮಿ ನಿಮಿತ್ತ ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net