ನಾಳೆ ಸಾಯಿಬಾಬಾ ದೇವಸ್ಥಾನದಲ್ಲಿ ರಾಮನವಮಿ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ : ಇಲ್ಲಿನ ಅಥಣಿ ರಸ್ತೆಯ ಬಳಿಯ ಪ್ರತಿಕ್ಷಾ ನಗರದಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಏ. 6 ರಂದು ರಾಮನವಮಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಬೆಳಗ್ಗೆ 8ಕ್ಕೆ ಅಭಿಷೇಕ, 10ಕ್ಕೆ ಹೋಮ&ಹವನ ಮತ್ತು ಪೂಜಾ ಕೈಂಕರ್ಯ, ಮಧ್ಯಾಹ್ನ 12ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ ಜರುಗಲಿದೆ. ನಂತರ ಗೆಳೆಯರ ಬಳಗದವರಿಂದ ಸಂಗೀತ ರಸಮಂಜರಿ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಕಮೀಟಿ ಸಂಚಾಲಕ ಧರ್ಮಾಜಿ ಇಂಗಳೆ ಮತ್ತು ಕಾರ್ಯದರ್ಶಿ ಎಂ.ಎಸ್​. ಖೊದ್ನಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net