ರಾಮನವಮಿ ಉತ್ಸವ

Published on

ಹುಬ್ಬಳ್ಳಿ: ತಾಲೂಕಿನ ರೇವಡಿಹಾಳ ಮಹಾಬಲೇಶ್ವರ ಲೇಔಟ್ನಲ್ಲಿ ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಅವರ ಮೂರ್ತಿ ಪ್ರತಿಷ್ಠಾಪನೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ರಾಮನವಮಿ ನಿಮಿತ್ತ ಏ. 17ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಗ್ಗೆ ವಿದ್ಯಾಗಣಪತಿ ಮತ್ತು ಶಿರಡಿ ಸಾಯಿಬಾಬಾ, ಶನೇಶ್ವರ ಸ್ವಾಮಿಗೆ ಮಹಾಸಂಕಲ್ಪ, ಮಹಾರುದ್ರಾಭಿಷೇಕ, ಸತ್ಯನಾರಾಯಣ ಪೂಜೆ, ಗಣಹೋಮ, ಮೃತ್ಯುಂಜಯ ಹೋಮ, ಮಹಾಪ್ರಸಾದ ಜರುಗಲಿದೆ.

ರಾಯನಾಳ ವಿರಕ್ತಮಠದ ಶ್ರೀಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ರೇವಡಿಹಾಳದ ಶ್ರೀಸ್ವಾಮಿ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net