ಬೀದಿ ಬೀದಿಗಳಲ್ಲಿ ರಾಮೋತ್ಸವ, ರಾಮ ಭಜನೆ, ಮಹಾಪ್ರಸಾದ

IMG-20240122-WA0004.jpg
Published on


ಬೆಳಗಾವಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಬೆಳಗಾವಿ ಮಹಾನಗರ, ಯರಗಟ್ಟಿ, ಬೈಲಹೊಂಗಲ, ಗೋಕಾಕ, ರಾಮದುರ್ಗ, ಚಿಕ್ಕೋಡಿ ಸೇರಿದ ವಿವಿಧೆಡೆ ಬೀದಿ ಬೀದಿಗಳಲ್ಲಿ ರಾಮೋತ್ಸವ, ರಾಮಭಜನೆ, ಅನ್ನಪ್ರಸಾದ, ದೇವಸ್ಥಾನ ಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.

ಬೆಳಗಾವಿ ಬಿ.ಕೆ. ಕಂಗ್ರಾಳಿ ಸಾಯಿನಗರದಲ್ಲಿ ಮಕ್ಕಳು ರಾಮ,ಲಕ್ಷ್ಮಣ, ಹನುಮನ ವೇಷಭೂಷಣ ದಲ್ಲಿ ಕಣ್ಮನ ಸೆಳೆದರು. ರಾಮತೀರ್ಥ ನಗರ ಶಿವಾಲಯ, ಹಿಂಡಲಗಾ ಗಣಪತಿ ಸೇರು ವಿವಿಧ ದೇವಸ್ಥಾನಗಳಲ್ಲಿ, ವಿಶ್ವ ಹಿಂದೂಪರಿಷತ್ ಕಚೇರಿಗಳಲ್ಲಿ ರಾಮ ಭಜನೆ ಆರಂಭಗೊಂಡಿವೆ.
...
ಯರಗಟ್ಟಿ ಪಟ್ಟಣದಲ್ಲಿ ಪ್ರಸಾದ ವ್ಯವಸ್ಥೆ


ರಾಮೋತ್ಸವ ಹಿನ್ನೆಲೆ ಯರಗಟ್ಟಿ ಪಟ್ಟಣದಲ್ಲಿ ಸೋಮವಾರ ಬೆಳಗ್ಗೆಯಿಂದಲೇ ರಸ್ತೆ ಬದಿ. ಓಣಿಗಳಲ್ಲಿ ರಾಮಭಜನೆ, ಮೆರವಣಿಗೆ, ಸಾರ್ವಜನಿಕರಿಗೆ ಪ್ರಸಾದ ವಿತರಣೆ ಆರಂಭವಾಗಿದೆ. ಸ್ಥಳೀಯ ವ್ಯಾಪಾರಿಗಳು, ವಾಹನ ಚಾಲಕರು ಸ್ವಯಂ ಪ್ರೇರಣೆಯಿಂದ ರಾಮೋತ್ಸವ ದಲ್ಲಿ ಭಾಗವಹಿಸಿದ್ದು ವಿಶೇಷ ವಾಗಿತ್ತು.

ಯರಗಟ್ಟಿ ಪಟ್ಟಣದಲ್ಲಿ ರಾಮೋತ್ಸವ ನಿಮಿತ್ತ ಭಕ್ತರು ಪ್ರಸಾದ ವ್ಯವಸ್ಥೆ ಮಾಡಿದರು.
ಯರಗಟ್ಟಿ ಪಟ್ಟಣದಲ್ಲಿ ರಾಮೋತ್ಸವ ನಿಮಿತ್ತ ಭಕ್ತರು ಪ್ರಸಾದ ವ್ಯವಸ್ಥೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net