ರ‌್ಯಾಲಿ:(Rally) ಅಭಿನ್ ರೈಗೆ ದ್ವಿತೀಯ ಸ್ಥಾನ

ryali
Published on

ಮಡಿಕೇರಿ: ಬ್ಯೂ ಬ್ಯಾಂಡ್ ಸಂಸ್ಥೆ ವತಿಯಿಂದ ನಾಸಿಕ್‌ನಲ್ಲಿ ಆಯೋಜಿತ ಜೂನಿಯರ್ ನ್ಯಾಷನಲ್ ರ‌್ಯಾಲಿ(Rally) ಚಾಂಪಿಯನ್ ಶಿಪ್‌ನ ರ‌್ಯಾಲಿ ಆಫ್ ಮಹರಾಷ್ಟ್ರದಲ್ಲಿ ಮೇಕೇರಿಯ ಅಭಿನ್ ರೈ ಎರಡನೇ ಸ್ಥಾನ ಪಡೆದಿದ್ದಾರೆ.


ಇಂಡಿಯನ್ ನ್ಯಾಷನಲ್ ರ‌್ಯಾಲಿ ಚಾಂಪಿಯನ್ ಶಿಪ್‌ನ ವಿಭಾಗ ೩ರಲ್ಲಿ ಪಾಲ್ಗೊಂಡಿದ್ದ ಅಭಿನ್ ರೈ ನಾಲ್ಕನೇ ಸ್ಥಾನ ಪಡೆದಿದ್ದಾರೆ. ದೇಶದ ವಿವಿಧೆಡೆಗಳ ೨೯ ರ‌್ಯಾಲಿ ಚಾಲಕರು ಈ ವಿಭಾಗದಲ್ಲಿ ಪಾಲ್ಗೊಂಡಿದ್ದರು. ಅಭಿನ್ ರೈ ಮೇಕೇರಿ ಗ್ರಾಮದ ರತ್ನಾಕರ್ ರೈ ಮತ್ತು ನಮಿತಾ ರೈ ದಂಪತಿ ಪುತ್ರನಾಗಿದ್ದು, ಕಳೆದ ವರ್ಷ ರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಚಾಂಪಿಯನ್ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net