

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕಾರ್ಮಿಕರು ತ್ಯಾಗ, ಬಲಿದಾನಗಳಿಂದ ಹೋರಾಡಿ ಗೆದ್ದ ದಿನವೇ ಮೇ ದಿನ. ಹೋರಾಟದ ಮೂಲಕ ಗೆದ್ದ ಅವಕಾಶಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದು, ಇದರ ವಿರುದ್ದ ಕಾರ್ಮಿಕರು ಸಂಘಟಿತರಾಗಬೇಕಾದ ಅಗತ್ಯವಿದೆ ಎಂದು ಸಿಐಟಿಯು ದ.ಕ. ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಹೇಳಿದರು.
ಬೆಳ್ತಂಗಡಿ ಮಿನಿ ವಿಧಾನಸೌಧ ಎದುರು ಸಿಐಟಿಯು ನೇತೃತ್ವದಲ್ಲಿ ನಡೆದ ಮೇ ದಿನಾಚರಣೆಯ ರ‌್ಯಾಲಿಯಲ್ಲಿ ಮಾತನಾಡಿದರು.
ಬಿ.ಎಂ.ಭಟ್ ಅಧ್ಯಕ್ಷತೆ ವಹಿಸಿದ್ದರು. ಈಶ್ವರಿಶಂಕರ್, ರೈತ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮಣ ಗೌಡ ಪಾಂಗಳ ಮಾತನಾಡಿದರು. ಈ ಸಂದರ್ಭ ಸಂಗಾತಿ ಸ್ವಸಹಾಯ ಗುಂಪುಗಳ ಲಾಭಾಂಶ ವಿತರಿಸಲಾಯಿತು. ಸಿಐಟಿಯು ಮುಖಂಡರಾದ ಜಯಶ್ರೀ, ನೆಬಿಸಾ, ಧನಂಜಯ ಗೌಡ, ಸುಕುಮಾರ್ ದಿಡುಪೆ, ಜಯರಾಮ ಮಯ್ಯ, ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಕಿರಣ ಪ್ರಭಾ, ಡಿ.ವೈ.ಎಫ್.ಐ. ತಾಲೂಕು ಅಧ್ಯಕ್ಷೆ ಅಧಿತಿ ಕೊಯ್ಯೂರು, ರೈತ ಕಾರ್ಮಿಕ ಮುಖಂಡರಾದ ಪುಷ್ಪಾ, ಅಶ್ವಿತಾ, ಅಪ್ಪಿ, ಕುಮಾರಿ, ಅಜಿ ಎಂ.ಜೋಸ್, ವಿಶ್ವನಾಥ ಶಿಬಾಜೆ, ಸಲಿಮೋನ್, ವಿಶ್ವನಾಥ, ವಿದ್ಯಾರ್ಥಿ ಸಂಘ(ಎಸ್.ಎಫ್.ಐ.) ಜಿಲ್ಲಾ ಕಾರ್ಯದರ್ಶಿ ವಿನುಶಾ ರಮಣ, ಜಯಂತ ಪಾದೆಜಾಲು, ಫಾರೂಕ್ ಮಡಂಜೋಡಿ, ಮಹಮ್ಮದ್ ಅನಸ್, ವಸಂತ ಟೈಲರ್, ಜಯಂತ ಪಂಜುರ್ಳಿಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಸಿಐಟಿಯು ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಲೋಕೇಶ್ ಕುದ್ಯಾಡಿ ಸ್ವಾಗತಿಸಿದರು. ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ಅಭಿಷೇಕ್ ವಂದಿಸಿದರು. ರೈತ ಮುಖಂಡರಾದ ಶ್ಯಾಮರಾಜ್ ಕಾರ್ಯಕ್ರಮ ನಿರೂಪಿಸಿದರು.