

ನೆಲಮಂಗಲ: ಯುವ ಸಮುದಾಯ ಹೆಚ್ಚಾಗಿ ರಂಗಕಲೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ರಂಗಭೂಮಿ ಕಲೆ ಉಯಲು ಸಾಧ್ಯ ಎಂದು ರಂಗಶಿಕ್ಷಣ ಕೇಂದ್ರ ಸಂಸ್ಥಾಪಕಧ್ಯಕ್ಷ ಸಿ.ಸಿದ್ದರಾಜು ಹೇಳಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಅಂಜನಾದ್ರಿ ಕಲಾನಿಕೇತ ಟ್ರಸ್ಟ್ ಆಯೋಜಿಸಿದ್ದ ರಕ್ತಭೂಮಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಂಗಭೂಮಿ ಸಾಕಷ್ಟು ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಗ್ರಾಮೀಣ ಪ್ರದೇಶದ ಜನರಿಂದ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ರಾಜ್ಯದಲ್ಲೇ ಅತಿಹೆಚ್ಚು ಕಲಾವಿದರನ್ನು ಹೊಂದಿರುವ ಜಿಲ್ಲೆಯಾಗಿದೆ. ದಕ್ಷಿಣ ಭಾರತದಲ್ಲಿ ಮರಾಠಿ ರಂಗಭೂಮಿಗೆ ಸೆಡ್ಡು ಹೊಡೆದು ಗುಬ್ಬಿ ವೀರಣ್ಣ ಅವರು ಕನ್ನಡ ರಂಗಭೂಮಿ ನಿರ್ಮಾಣಕ್ಕೆ ಬಹುಮುಖ್ಯ ಪಾತ್ರವಹಿಸಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಕಷ್ಟು ಮಂದಿ ಸಾಗುತ್ತಿದ್ದಾರೆ ಎಂದರು.
ರಂಗಭೂಮಿ ಕಲಾವಿದರ ಸಂದ ಜಿಲ್ಲಾಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ ಮಾತನಾಡಿ, ರಂಗಭೂಮಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ರಂಗಭೂಮಿ ಮತ್ತು ಸಾಹಿತ್ಯ ಒಂದೇ ನಾಟ್ಯದ ಎರಡು ಮುಖಗಳಿದ್ದಂತೆ. ಟಿವಿ ಮಾಧ್ಯಮಗಳ ಪ್ರಭಾವ ಹಾಗೂ ಅರ್ಥಿಕ ಸಮಸ್ಯೆಯಿಂದ ಇತ್ತೀಚೆಗೆ ರಂಗ ಕಲ ಕಣ್ಮರೆಯಾಗುತ್ತಿದೆ ಎಂದು ಬೇಸರಿಸಿದರು.
ಪೌರಾಣಿಕ ನಾಟಕ ಅಭಿನಯ ಮಾಡಬೇಕಾದರೆ ಇಂದು 2 ಲಕ್ಷ ರೂ.ಗೂ ಅಧಿಕ ಹಣಬೇಕು. ಕಲಾವಿದರೇ ಹಣ ಸಂದಾಯ ಮಾಡಿಕೊಂಡು ನಾಟಕ ಪ್ರದರ್ಶಿಸುತ್ತಿದ್ದಾರೆ. ರಾಜ್ಯದಲ್ಲಿ ನಾಟಕ ಕಲಿಸುವ ಗುರುಗಳು ಬೆರಳೆಣಿಕೆಯಷ್ಟಿದ್ದು, ಗುರುಗಳು ಶಿಷ್ಯರನ್ನು ತಯಾರಿ ಮಾಡುದಿರುವುದು ಬೇಸರದ ಸಂಗತಿ. ಗುರುಗಳು ಶಿಷ್ಯರನ್ನು ತಯಾರಿಸುವಂತಹ ಕೆಲಸ ಮಾಡಿದಾಗ ಮುಂದಿನ ಯುವ ಪೀಳಿಗೆಗೆ ಪೌರಾಣಿಕ ನಾಟಕ ಜೀವಂತವಾಗಿರಿಸಲು ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಸಾಕಷ್ಟು ಜನ ಕವನ ವಾಚಿಸಿದರು. ನಂತರ ಎಂ.ಎಸ್.ಗಂಗೂ ರಚಿತ ಚಿಕ್ಕಮಾರನಹಳ್ಳಿ ದಿನೇಶ್ ನಿರ್ದೇಶಿಸಿದ್ದ ರಕ್ತಭೂಮಿ ಎಂಬ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಕಲಾವಿದರ ಬಳಗದ ಅಧ್ಯಕ್ಷ ಡಾ.ಜಿ.ಗಂಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಉಪಾಧ್ಯಕ್ಷ ಸಿ.ಎಂ.ಗೌಡ, ರೈತ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ರಮೇಶ್, ಕಸಾಪ ಅಧ್ಯಕ್ಷ ಪ್ರದಿಪ್ಕುಮಾರ್, ಕಾರ್ಯದರ್ಶಿ ಪ್ರಕಾಶ್ಮೂರ್ತಿ, ಯುವ ಕಾಂಗ್ರೆಸ್ ನಗರ ಅಧ್ಯಕ್ಷ ನಾರಾಯಣ್ಗೌಡ, ತ್ಯಾಮಗೊಂಡ್ಲು ಹೋಬಳಿ ಅಧ್ಯಕ್ಷ ಎಚ್.ಕೆ.ಯಶ್ವಂತ್, ಕಾರ್ಮಿಕ ಟಕ ಅಧ್ಯಕ್ಷ ಸಿದ್ದರಾಜು, ಟ್ರಸ್ಟ್ನ ಅಧ್ಯಕ್ಷ ಚಿಕ್ಕಮಾರನಹಳ್ಳಿದಿನೇಶ್, ಕಾರ್ಯದರ್ಶಿ ಡಾ.ಜಿ.ಎನ್.ಕನಕರಾಜು, ಕಾರ್ಯನಿರತ ಪತ್ರಕರ್ತರ ಸಂದ ಪ್ರಧಾನ ಕಾರ್ಯದರ್ಶಿ ಡಿ.ಆರ್.ಅಭಿಷೇಕ್, ಕಸಬಾ ವಿಎಸ್ಎಸ್ಎನ್ ಕಾರ್ಯದರ್ಶಿ ಮಹೇಶ್ಕುಮಾರ್, ಸಾಹಿತಿ ಡಾ.ಶಿವಲಿಂಗಯ್ಯ, ಜನಾರ್ದನ್, ನಾಗರಾಜು, ಪುಷ್ಪಾ, ಯಶೋದಾ, ಮನು, ಕಲಾವಿದ ಸಾಗರ್, ಕಿರಣ್, ಡಿ.ಆರ್.ಅನಂತ್ಕುಮಾರ್, ಕೀರ್ತನ್, ಭೂಮಿಕಾ, ದಶರಥ ಇದ್ದರು.