ಮನಸ್ಸಿಗೆ ಹತ್ತಿರವಾದವರು ಕಷ್ಟ ಅನುಭವಿಸುತ್ತಿದ್ದಾರೆ, ಬರ್ತ್‌ಡೇ ಕ್ಯಾನ್ಸಲ್ ಎಂದ ರಕ್ಷಕ್ ಬುಲೆಟ್

rakshak
Published on

ಬೆಂಗಳೂರು: : ನಟ ದರ್ಶನ್ ಅವರು ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ಕುರಿತಾಗಿ ನಟ ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್‌ ಬುಲೆಟ್‌ ಬೇಸರಕ್ಕೆ ಒಳಗಾಗಿ ಪರೋಕ್ಷವಾಗಿ ಪೋಸ್ಟ್ ಒಂದನ್ನು ಶೇರ್‌ ಮಾಡಿದ್ದಾರೆ.  ಜೂನ್ 21 ಅವರ ಜನ್ಮದಿನ. ಈ ದಿನಾ ರಕ್ಷಕ್‌ ಸಿನಿಮಾ ಕೂಡ ಅನೌನ್ಸ್‌ ಆಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಬರ್ತ್​ಡೇ ಸೆಲೆಬ್ರೇಷನ್​ ಮಾಡಿಕೊಳಲ್ಲ ಎಂದು ಹೇಳಿಕೊಂಡಿದ್ದಾರೆ.

ಚಿತ್ರದುರ್ಗದ ರೇಣುಕಾ ಸ್ವಾಮಿಯ ಬರ್ಬರ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಎ2 ಆರೋಪಿಯಾಗಿ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಬುಲೆಟ್‌ ರಕ್ಷಕ್‌ ತನ್ನ ಹುಟ್ಟುಹಬ್ಬ ಈ ವರ್ಷ ಆಚರಿಸುವುದಿಲ್ಲ ಎಂದಿದ್ದಾರೆ.

ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಫಾದರ್ಸ್‌ ಡೇ ಸಮಯದಲ್ಲಿ ತನ್ನ ತಂದೆ ದಿವಂಗತ ಬುಲೆಟ್‌ ಪ್ರಕಾಶ್‌ ಮತ್ತು ದರ್ಶನ್‌ ಜತೆಯಾಗಿರುವ ಫೋಟೋವನ್ನು ರಕ್ಷಕ್‌ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.

ʻʻಎಲ್ಲರಿಗೂ ನಮಸ್ಕಾರ ಹಾಗೂ ಫಾದರ್ಸ್ ಡೇ ಶುಭಾಶಯಗಳು. ಇವತ್ತು ಬೆಳಗ್ಗೆಯಿಂದ ನನ್ನ ತಂದೆಯ ನೆನಪು ನನ್ನನ್ನು ತುಂಬಾ ಕಾಡುತ್ತಿದೆ. ಎಲ್ಲರಂತೆ ನನಗೂ ಕೂಡ ನನ್ನ ತಂದೆಯೇ ಮೊದಲ ಹೀರೊ. ಹೀರೊ ಅಷ್ಟೇ ಅಲ್ಲ ಒಳ್ಳೆಯ ಮಾರ್ಗದರ್ಶಕರು ಹಾಗೂ ಸ್ನೇಹಿತರು ಕೂಡ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ನಡೆದ ಕೆಲವೊಂದು ಘಟನೆಗಳು ಮನಸ್ಸಿಗೆ ನೋವು ತಂದಿದೆ. ನಮ್ಮ ಮನಸ್ಸಿಗೆ ಹತ್ತಿರವಾದವರು ಕಷ್ಟ ಅನುಭವಿಸುತ್ತಿರುವಾಗ ನಾವು ಸಂಭ್ರಮಾಚರಣೆ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ. ನಾನು ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ. ಮುಂದಿನ ವರ್ಷದ ಹುಟ್ಟು ಹಬ್ಬದಷ್ಟರಲ್ಲಿ ಏನಾದರೂ ಒಂದು ಸಾಧನೆ ಮಾಡಿರುತ್ತೇನೆ. ಆಗ ನನ್ನ ಎಲ್ಲ ಸ್ನೇಹಿತರು, ಹಿತೈಷಿಗಳು, ಗುರು-ಹಿರಿಯರು ಹಾಗೂ ಪ್ರೀತಿ ಪಾತ್ರರೊಂದಿಗೆ ಆಚರಣೆ ಮಾಡುತ್ತೇನೆ. ಹೀಗೆ ನಿಮ್ಮ ಪ್ರೀತಿ ವಿಶ್ವಾಸ ಹಾಗೂ ಆಶೀರ್ವಾದ ನನ್ನ ಮೇಲಿರಲಿ ನನ್ನನ್ನು ಬೆಂಬಲಿಸುತ್ತಿರುವ ಎಲ್ಲ ನನ್ನ ಸ್ನೇಹಿತರು, ಪ್ರೀತಿ ಪಾತ್ರರು, ಮಾಧ್ಯಮ ಮಿತ್ರರು, ಟ್ರೋಲ್ ಪೇಜ್‌ಗಳು, ಯೂಟ್ಯೂಬ್‌ರ್ಸ್‌ ಹಾಗೂ ಎಲ್ಲಾ ಸಾಮಾಜಿಕ ಜಾಲತಾಣದ ಸ್ನೇಹಿತರಿಗೆ ಧನ್ಯವಾದಗಳು’ ಎಂದು ಬರೆದಿದ್ದಾರೆ.

ಬುಲೆಟ್‌ ಮತ್ತು ಡಿಬಾಸ್‌ ಸ್ನೇಹ ಬೆಲೆಕಟ್ಟಲಾಗದು" "ಸೂಪರ್‌ ಬ್ರೋ ನಿಮ್ಮಂತಹ ಅಭಿಮಾನಿಗಳೇ ನಮಗೆ ಧೈರ್ಯ ಎಂದು ಫ್ಯಾನ್ಸ್​​ ಕಾಮೆಂಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net