ಬಾಂಧವ್ಯ ವೃದ್ಧಿಗೆ ರಕ್ಷಾಬಂಧನ ಆಚರಣೆ

24 ylp 02 (raksha)
Published on

ಯಲ್ಲಾಪುರ: ಬಾಂಧವ್ಯ ಬಲಗೊಳಿಸುವ ಸಲುವಾಗಿ ರಕ್ಷಾಬಂಧನ ಆಚರಿಸಲಾಗುತ್ತದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಶಿವಲೀಲಾ ಹೇಳಿದರು.

ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ಪತ್ರಕರ್ತರಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಣದ ಹಿಂದೆ ಹೋಗಿ ತೋರಿಕೆಯ ಅಂತಸ್ತು ಪ್ರದರ್ಶಿಸುವ ದಿನಮಾನಗಳಲ್ಲಿ ಪ್ರೀತಿ ವಿಶ್ವಾಸದಿಂದ ಸಂಬಂಧ ಎಳೆ ಶಿಥಿಲವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಹೋದರಿ ಸಹೋದರನಿಗೆ ರಕ್ಷೆ ಕಟ್ಟುವ ಮೂಲಕ ಬಾಂಧವ್ಯದ ಮಹತ್ವ ಸಾರಲಾಗುತ್ತಿದೆ ಎಂದರು.

ಬ್ರಹ್ಮಕುಮಾರಿ ವೀಣಕ್ಕ, ದಾಕ್ಷಾಯಿಣಿ ಭಟ್ಟ, ಪತ್ರಕರ್ತರಾದ ಶಂಕರ ಭಟ್ಟ ತಾರಿಕಮಕ್ಕಿ, ಸುಬ್ರಾಯ ಬಿದ್ರೆಮನೆ, ಶ್ರೀಧರ ಅಣಲಗಾರ, ವಿ.ಜಿ. ಗಾಂವ್ಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net