ರಕ್ಷಾಬಂಧನಕ್ಕಿದೆ ವಿಶೇಷ ಮಹತ್ವ

04kgl01
Published on

ಕಾರ್ಗಲ್: ಬಾಂಧವ್ಯಗಳು ವ್ಯಾಪ್ಯಾರೀಕರಣಗೊಳ್ಳಬಾರದು ಎಂದು ಪತ್ರಕರ್ತ ರಾಘವೇಂದ್ರ ಶರ್ಮ ತಲವಾಟ ಹೇಳಿದರು.

ಪಟ್ಟಣದ ಶರಾವತಿ ವಿದ್ಯಾಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ರಕ್ಷಾಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾಬಂಧನ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ ಎಂದರು.
ರಕ್ಷಾಬಂಧನ ನಿನ್ನೆ ಮೊನ್ನೆಯದಲ್ಲ. ಇದಕ್ಕೆ ನೂರಾರು ವರ್ಷದ ಇತಿಹಾಸವಿದೆ. ಹಿಂದೆ ರಾಜ್ಯಗಳ ಯುದ್ಧ ನಡೆಯುವ ಸಂದರ್ಭದಲ್ಲಿ ರಾಣಿಯರು ಮತ್ತೊಂದು ರಾಜ್ಯದ ರಾಜನಿಗೆ ಸಹೋದರಿ ಭಾವದಲ್ಲಿ ರಾಖಿಯನ್ನು ಕಳುಹಿಸಿ ಯುದ್ಧವಾಗದೇ ಶಾಂತಿ ನೆಲಸಿದ ಉದಾಹರಣೆಗಳಿವೆ. ಚಿತ್ತೂರಿನ ರಾಣಿ ಹುಮಾಯೂನನಿಗೆ ಕಟ್ಟಿದ ರಾಖಿಯೇ ಇದಕ್ಕೆ ಉದಾಹರಣೆ. ಇಂತಹ ಮಧುರ ಬಾಂಧವ್ಯದ ಸ್ವಾಧ ಮುಂದಿನ ಪೀಳಿಗೆಗೆ ತಿಳಿಯಬೇಕೆಂದರೆ ಇಂತಹ ಕಾರ್ಯಕ್ರಮಗಳ ಆಚರಣೆಯ ಮೂಲಕವೇ ಸಾಧ್ಯ ಎಂದು ಹೇಳಿದರು.
ಸದೋತರತ್ವವನ್ನು ಬಿಂಬಿಸುವ ಭಾರತೀಯ ಸಂಸ್ಕೃತಿಯ ಪ್ರತೀಕವಾದ ರಾಖಿಯನ್ನು ಸಭೆಯಲ್ಲಿದ್ದ ಎಲ್ಲಾ ಪಾಲಕರಿಗೂ ಕಟ್ಟಲಾಯಿತು. ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಪ್ರಮುಖರಾದ ಎನ್.ಎನ್.ಶ್ರೀಧರ್ ಭಟ್, ಅಜಿತ್, ಜ್ಯೋತಿ ನೇಮಿರಾಜ್, ಪ್ರಗತಿ ಪ್ರದೀಪ್, ಶ್ವೇತಾ ರವೀಂದ್ರಕುಮಾರ್, ಸೌಮ್ಯಾ ವಿಶ್ವನಾಥ್, ಶಿಕ್ಷಣ ಸಂಸ್ಥೆಯ ಮಾತಾಜಿಯವರಾದ ರಂಜಿತಾ, ರಶ್ಮಿಕಾ, ಚೈತ್ರಾ, ಸುಶ್ಮಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net