

ಮಂಗಳೂರು : ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ರಕ್ಷಾಬಂಧನ ಉತ್ಸವ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಯುವ ಬರಹಗಾರ ಲತೇಶ್ ಬಾಕ್ರಬೈಲು ಮಾತನಾಡಿ ‘
ಸಹೋದರ-ಸಹೋದರಿಯರ ಬಾಂಧವ್ಯ ನೆನಪಿಸುವ ರಕ್ಷಾಬಂಧನ ಉತ್ಸವ ಇಂದು ರಾಷ್ಟ್ರ ಪ್ರೇಮದ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ದೇಶದೆಲ್ಲೆಡೆ ಆಚರಿಸಲ್ಪಡುತ್ತಿದೆ. ಸಮಾಜದ ಸಂಸ್ಕಾರ ಕೇಂದ್ರಗಳಾದ ವಿದ್ಯಾಲಯಗಳು ದೇಶಾಭಿಮಾನವನ್ನು ಮೂಡಿಸುವ ಕೇಂದ್ರಗಳಾಗಬೇಕು. ಈ ದೇಶಕ್ಕೆ ಸೇರಿದ ಪ್ರತಿಯೊಂದು ನನ್ನದು ಮತ್ತು ಅದರ ರಕ್ಷಣೆಗೈಯ್ಯುವುದು ನನ್ನ ಹೊಣೆಗಾರಿಕೆಯಾಗಿದೆ ಎನ್ನುವ ಸಂಕಲ್ಪ ಬೆಳೆಸಿಕೊಳ್ಳಬೇಕು ಎಂದರು.
ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ ನಮ್ಮ ದೇಶವಿಂದು ವಿಜ್ಞಾನ, ತಂತ್ರಜ್ಞಾನ, ಆರ್ಥಿಕ ಪ್ರಗತಿಯ ದೃಷ್ಟಿಯಲ್ಲಿ ಮುಂಚೂಣಿಯಲ್ಲಿದ್ದು ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಜತೆಗೆ ಗುರುತಿಸಿಕೊಳ್ಳುತ್ತಿದೆ. ಕ್ರೀಡಾ ಕ್ಷೇತ್ರಗಳಲ್ಲೂ ನಮ್ಮ ದೇಶದ ಪ್ರತಿಭೆಗಳ ಸಾಧನೆಯಿಂದ ಹೆಮ್ಮೆ ಪಡುವಂತಾಗಿದೆ. ಎಂದರು.
ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರ, ಶಾರದಾ ವಿದ್ಯಾಲಯದ ಹಿರಿಯ ಪ್ರಾಂಶುಪಾಲೆ ಸುನೀತಾ ವಿ. ಮಡಿ, ಪ್ರಾಂಶುಪಾಲ ದಯಾನಂದ ಕಟೀಲ್ ಉಪಸ್ಥಿತರಿದ್ದರು.