ರಕ್ಷಾ ಬಂಧನದಿಂದ ಸಹೋದರತ್ವ ಗಟ್ಟಿ

h9-siddivinayak
Published on

ಹುಬ್ಬಳ್ಳಿ: ಹುಬ್ಬಳ್ಳಿ ಸಾರ್ವಜನಿಕ ಸಮಿತಿಗಳ ಮಹಾ ಮಂಡಳ ಆಶ್ರಯದಲ್ಲಿ ನಗರದ ಗಬ್ಬೂರ ವೃತ್ತದ ಶ್ರೀ ಸಿದ್ಧಿವಿನಾಯಕ ಆಶ್ರಮದಲ್ಲಿ ಶನಿವಾರ ರಕ್ಷಾ ಬಂಧನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಮಾಜ ಸೇವಕ ಧರಣೇಂದ್ರ ಜವಳಿ ಉದ್ಘಾಟಿಸಿ ಮಾತನಾಡಿ, ಹಬ್ಬ-ಹರಿದಿನ, ರಾಷ್ಟ್ರೀಯ ಹಬ್ಬಗಳು ಎಲ್ಲರನ್ನೂ ಒಂದುಗೂಡಿಸುವ ದಿವ್ಯ ಬಂಧನ. ಇದರ ಪ್ರತಿಯಾಗಿ ರಕ್ಷಾಬಂಧನವು ಸಹೋದರತ್ವ ಗಟ್ಟಿಗೊಳಿಸುವ ಅಡಿಪಾಯವಾಗಿದೆ. ಜಾತಿ -ಮತ ಎನ್ನದೆ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುತ್ತದೆ ಎಂದರು.

ಪತ್ರಕರ್ತ ಈರಣ್ಣ ಪಾಳೇದ, ಲೋಹ ಶಿಲ್ಪಿ ಸಾಯಿನಾಥ ಹಿತ್ತಾಳಿ ಮಾತನಾಡಿದರು.

ಸಿದ್ಧಿವಿನಾಯಕ ಆಶ್ರಮದ ಸಿದ್ಧಿವಿನಾಯಕ ಹುಲಗೂರಮಠ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಂಗೀತಾ ಇಜಾರದ ಅಧ್ಯಕ್ಷತೆ ವಹಿಸಿದ್ದರು

ಮಹಾ ಮಂಡಳದ ಮಹಿಳೆಯರು ಆಶ್ರಮದಲ್ಲಿದ್ದ ವೃದ್ಧರು, ಮಕ್ಕಳಿಗೆ, ರಾಖಿ ಕಟ್ಟಿ ಆರತಿ ಬೆಳಗಿ, ಸಿಹಿ ಹಂಚಿ, ಬಟ್ಟೆ ವಿತರಿಸಿದರು.

ಮಹಾ ಮಂಡಳದ ಚಂದ್ರಶೇಖರ ಗಾಣಿಗೇರ, ಅಕ್ಕಮ್ಮ ಕಂಬಳಿ, ಪುಷ್ಪಾ ಹಿತ್ತಾಳಿ, ಸರಸ್ವತಿ ಮೆಹರವಾಡೆ, ಮಧುಮತಿ ಪಾಟೀಲ, ರೇಖಾ ಆಪ್ಟೆ, ಡಾ. ಮಂಜುಳಾ ಹತ್ತಿಮತ್ತೂರ, ಸವಿತಾ ಚಂದನಮಟ್ಟಿ, ಅನಿತಾ ಜಡಿ, ವಿಜಯಾ ಏಕಬೋಟೆ, ಅಕ್ಕಮಹಾದೇವಿ ಅಂದೇಲಿಮಠ, ಸಂಗೀತಾ ದೇವದಾಸ, ಪಾರ್ವತಿ ಹಿರೇಮಠ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಚಂದ್ರಶೇಖರ ನರಗುಂದ, ರೋಹನ ಗೊಂದಕರ, ಗೀತಾ ಕಾಟಿಗರ, ರೇಖಾ ಏಕಬೋಟೆ ಇತರರಿದ್ದರು. ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net