ಬೆಳಗಾವಿ ಮಾರುಕಟ್ಟೆಯಲ್ಲಿ ರಂಗು ರಂಗಿನ‌ ರಾಖಿ ಖರೀದಿಸಿದ ಯುವತಿಯರು

IMG-20230829-WA0040.jpg
Published on

ಬೆಳಗಾವಿ : ಸೋದರ-ಸೋದರಿಯರ ಬ್ರಾತೃತ್ವ ಸಾರುವ ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಮಾರುಕಟ್ಟೆ ತಹರೇವಾರಿ ರಾಖಿಗಳು ಲಗ್ಗೆ ಇಟ್ಟಿದ್ದು, ಇಡೀ ಮಾರುಕಟ್ಟೆ ಕಳೆಗಟ್ಟಿದೆ. ಬೆಳಗಾವಿ ನಗರ ಮಾರುಕಟ್ಟೆಯ ಅಂಗಡಿಗಳನ್ನು ಅಲಂಕರಿಸಿರುವ ಬಣ್ಣ ಬಣ್ಣದ ರಾಖಿಗಳು ಅಲಂಕರಸಿದ್ದು, ಮಂಗಳವಾರ ಯುವತಿಯರು ರಾಖಿಗಳನ್ನು ಖರೀದಿಸಲು ಮುಗಿ ಬಿದ್ದಿದ್ದರು.

ವರ್ಷಕ್ಕೊಮ್ಮೆ ಸೋದರರ ಕೈಗೆ ರಾಖಿ ಕಟ್ಟಿ ರಕ್ಷಣೆಯ ವಚನ ಪಡೆಯುವ ಸಂಪ್ರದಾಯದ ಸಂಭ್ರಮದ ನೂಲ ಹುಣ್ಣಿಮೆಗೆ ದಿನ ಸಮೀಪಿಸುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ರಾಖಿ ಮಾರಾಟಮಾಡಲಾಗುತ್ತಿತ್ತು. ಬುಧವಾರ ರಕ್ಷಾ ಬಂಧನವಿರುವುದರಿಂದ ಮಂಗಳವಾರ ಇಡೀ ದಿನ ರಾಖಿ ಖರೀದಿ ಜೋರಾಗಿತ್ತು.

ಬೆಳಗಾವಿಯ ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಕಾಕತಿವೇಸ್ ರೋಡ್, ಖಡೇಬಜಾರ್ ಹಾಗೂ ಪಾಂಗುಳಗಲ್ಲಿಯ ಮಾರುಕಟ್ಟೆಯಲ್ಲಿ ಹೇರಳವಾಗಿ ರಾಖಿ ಸಂಗ್ರಹವಿತ್ತು.  10ರಿಂದ 150 ರೂ.ಗಳ ವರೆಗೂ ರಾಖಿಗಳ ಮಾರಾಟ ನಡೆದಿತ್ತು. ಶಾಲೆ, ಕಾಲೇಜ್‌ಗಳ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಕ ರಾಖಿಗಳಿಗೆ ಹೆಚ್ಚು ಬೆಲೆ ಕೊಟ್ಟು  ಖರೀದಿಸುತ್ತಿದ್ದರು. ಕೇವಲ ರಾಖಿ ಮಾರಾಟ ಮಾತ್ರವಲ್ಲದೇ, ಸ್ವೀಟ್ ಮಾರ್ಟ್ ಹಾಗೂ ಬೇಕರಿಗಳಲ್ಲೂ ಚಾಕಲೇಟ್ ಹಾಗೂ ಸಿಹಿ ಖಾದ್ಯಗಳು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net