

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರೇಣುಕಾನಗರದ ಕೇಶವ ವಿದ್ಯಾ ಕೇಂದ್ರದ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಸೋಮವಾರ ರಕ್ಷಾ ಬಂಧನ ಉತ್ಸವ ಆಚರಿಸಲಾಯಿತು.
ವಿದ್ಯಾರ್ಥಿಗಳ ತಂಡ ರಚಿಸಿ ರಕ್ಷೆ ಕಟ್ಟುವ ಮೂಲಕ ಉತ್ಸವ ಮಹತ್ವ ತಿಳಿಸಲಾಯಿತು.
ಮುಖ್ಯ ವಕ್ತಾರರಾಗಿದ್ದ ಕನಕದಾಸ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಂದೀಪ ಬೂದಿಹಾಳ ಮಾತನಾಡಿ, ರಕ್ಷೆಯು ಕರ್ತವ್ಯ ರಾಷ್ಟ್ರಪ್ರೇಮ, ಏಕತೆ, ಸಮಾನತೆ, ಸಹಯೋಗದ ಸಂದೇಶ ಕೊಡುತ್ತದೆ. ನಾವೆಲ್ಲ ಒಟ್ಟಾಗಿ ಸಮಾಜದಲ್ಲಿ ಇರಬೇಕು. ವಿದ್ಯಾರ್ಥಿಗಳು ಗುರುಹಿರಿಯರನ್ನು ಗೌರವಿಸಬೇಕು. ಶ್ರದ್ಧ್ಧೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ಹೇಳಿದರು.
ಶಾಲೆಯ ಆಡಳಿತಾಧಿಕಾರಿ ಶ್ರೀಧರ ಗುರೂಜೀ ಮತ್ತು ಮಖ್ಯೋಪಾಧ್ಯಾಯಿನಿ ಶರಾವತಿ ಮಾತಾಜೀ, ಶಿಕ್ಷಕರು ಇದ್ದರು.