

ಹುಬ್ಬಳ್ಳಿ: ಇಲ್ಲಿಯ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಆಶ್ರಯದಲ್ಲಿ ನವನಗರದ ಶ್ರೀಮೈತ್ರಿ ವೃದ್ಧಾಶ್ರಮದಲ್ಲಿ ಸಂಭ್ರಮದಿಂದ ರಕ್ಷಾ ಬಂಧನ ಆಚರಿಸಲಾಯಿತು.
ಸಮಾಜಸೇವಕ ಅನಿಲ ಬೇವಿನಕಟ್ಟಿ ಮಾತನಾಡಿ, ಪವಿತ್ರವಾದ ರಾ ಬಂಧನ ಸಹೋದರ -ಸಹೋದರಿಯರಲ್ಲಿ ಒಂದು ವಿಶಿಷ್ಟ ಬಾಂಧವ್ಯ ಇಮ್ಮಡಿಗೊಳಿಸುತ್ತದೆ. ಸಂಬಂಧವನ್ನು ಏಳೇಳು ಜನ್ಮದ ಅನುಬಂಧವಾಗಿ ಪರಿವತಿರ್ಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೂಪಾ ಅಂಗಡಿ ಅವರು, ಸಹೋದರ -ಸಹೋದರಿಯರು ಒಂದಾಗಿ ಸೇರಿ ಆಚರಿಸುವ ಹಬ್ಬ ಅನ್ಯೋನ್ಯತೆ ಬೆಳೆಸುತ್ತದೆ ಎಂದರು.
ಆಶ್ರಮದ ಎಲ್ಲರಿಗೂ ಆರತಿ ಬೆಳಗಿ ಸಿಹಿ ಹಂಚಿ ಶ್ರೀರೆ ಕಟ್ಟಲಾಯಿತು. ಮಹಾಮಂಡಳದ ಅಕ್ಕಮ್ಮ ಕಂಬಳಿ, ಅನಿತಾ ಜಡಿ, ಸಾಧನಾ ಪೂಜಾರ, ಸ್ಮೀತಾ ಸಂಕಣ್ಣನವರ, ರೇಖಾ ಆಪ್ಟೇ, ಸಂಗೀತಾ ಜಡಿ, ಎಸ್.ಎಸ್. ಕಮಡೊಳ್ಳಿಶಟ್ರು, ಚನ್ನಬಸಪ್ಪ ಧಾರವಾಡಶಟ್ರು, ಅಮರೇಶ ಹಿಪ್ಪರಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.