

ನರೇಗಲ್ಲ: ಶ್ರಾವಣ ಪ್ರಾರಂಭವಾದರೆ ಹಬ್ಬಗಳು ಸಾಲುಗಟ್ಟಿ ನಿಲ್ಲುತ್ತವೆ. ಶನಿವಾರ ರಕ್ಷಾ ಬಂಧನವಿದ್ದು, ಸಹೋದರ- ಸಹೋದರಿಯರ ಬಾಂಧವ್ಯಕ್ಕೆ ಇದು ಸಾಕ್ಷಿಯಾಗಿದೆ. ಹಿಂದೆ ರಕ್ಷಾಬಂಧನವೆಂದು ಸಹೋದರಿಯರು ಸಹೋದರರ ಕೈ ಮಣಿಕಟ್ಟಿಗೆ ದೇವರ ಮುಂದಿರಿಸಿ, ಸಂಕಲ್ಪ ಮಾಡಿದ ದಾರವನ್ನು ಕಟ್ಟುತ್ತಿದ್ದರು. ಈಗ ಅದೇ ದೊಡ್ಡ ಉದ್ಯಮವಾಗಿ ಬೆಳೆದಿದೆ. ಅಂಗಡಿಗಳಲ್ಲಿ ಬಣ್ಣಬಣ್ಣದ ವಿವಿಧ ಬಗೆಯ ರಾಖಿಗಳು ಬಂದಿವೆ. ವರ್ಷದಿಂದ ವರ್ಷಕ್ಕೆ ರಾಖಿ ಬೇಡಿಕೆ ಹೆಚ್ಚಾಗುತ್ತಿದೆ. ವ್ಯಾಪಾರಿಗಳು ಅನೇಕ ಬಗೆಯ ರಾಖಿಗಳನ್ನು ತರಿಸುತ್ತಿದ್ದಾರೆ. ರಾಖಿ ಖರೀದಿಸುವ, ಬಗೆಬಗೆಯ ರಾಖಿ ಕೇಳುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಶನಿವಾರ ಬೆಳಿಗ್ಗೆ ಮಾರಾಟದ ಭರಾಟೆ ಮತ್ತಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ವ್ಯಾಪಾರಿ ನಿಂಗಪ್ಪ ಬೇವಿನಕಟ್ಟಿ.
ಫೋಟೋ ಶೀರ್ಷಿಕೆ 8ಎನ್‌ಆರ್‌ಜಿಎಲ್2) ನರೇಗಲ್ಲ ಪಟ್ಟಣದ ಅಂಗಡಿಯಲ್ಲಿ ಮಾರಟಕ್ಕಿಟ್ಟಿರುವ ಬಣ್ಣಬಣ್ಣದ ರಾಖಿ.