ರಕ್ಕಸಕೊಪ್ಪ ಜಲಾಶಯಕ್ಕೆ ಭಾಗಿನ ಅರ್ಪಣೆ

IMG_20230730_194328.jpg
Published on

ಬೆಳಗಾವಿ : ನಗರಕ್ಕೆ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯ ಶಂಕರ ಪಾಟೀಲ ನೇತೃತ್ವದಲ್ಲಿ ಗಣಾಚಾರಿ ಗಲ್ಲಿಯ ನಾಗರಿಕರ ವತಿಯಿಂದ ಭಾನುವಾರ ಗಂಗಾಪೂಜೆ ಸಲ್ಲಿಸಿ, ಭಾಗಿನ ಅರ್ಪಿಸಲಾಯಿತು.

ಬಳಿಕ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದೆ. ಸಂಪ್ರದಾಯ ಪ್ರಕಾರ ಪ್ರತಿ ವರ್ಷದಂತೆಯೇ ಗಂಗಾಪೂಜೆ ನೆರವೇರಿಸಿ, ವರ್ಷವೀಡಿ ಬೆಳಗಾವಿ ಮಹಾನಗರಕ್ಕೆ ಪೂರೈಕೆಯಾಗುವಷ್ಟು ನೀರು ಸಂಗ್ರಹವಾಗಿರಲಿ ಎಂದು ಪ್ರಾರ್ಥಿಸಸಲಾಯಿತು ಎಂದರು.  
ಈ ಸಂದರ್ಭದಲ್ಲಿ ಅರವಿಂದ ಪುರಾಣಿಕಮಠ, ಗಂಗಾಧರ ಪಾಟೀಲ, ರಾಹುಲ್ ಖಾಬಿಕರ್, ಶಂಭು ಶಿಂತ್ರೆ, ಉಮೇಶ, ಗಣೇಶ ಹಾಗೂ ಗಣಾಚಾರಿ ಗಲ್ಲಿಯ ಹಿರಿಯ ನಾಗರಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net