ಕೆ-ರೇರಾ ಮುಖ್ಯಸ್ಥರಾಗಿ ರಾಕೇಶ್ ಸಿಂಗ್ ನೇಮಕ

rera chairman
Published on

ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ಕೆ-ರೇರಾ) ನೂತನ ಮುಖ್ಯಸ್ಥರಾಗಿ ಐಎಎಸ್ ನಿವೃತ್ತ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಸಂಸ್ಥೆಯಲ್ಲಿ ಅಧಿಕಾರ ವಹಿಸಿಕೊಂಡ ದಿನದಿಂದ 5 ವರ್ಷ ಅಥವಾ ಅವರಿಗೆ 65 ವರ್ಷ ಪೂರ್ಣಗೊಂಡ - ಇದರಲ್ಲಿ ಯಾವುದು ಮೊದಲೋ ಆ ದಿನಾಂಕದವರೆಗೆ ರಾಕೇಶ್ ಸಿಂಗ್ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಿಕಟಪೂರ್ವ ಚೇರ್‌ಮನ್ ಎಚ್.ಸಿ.ಕಿಶೋರ್‌ಚಂದ್ರ ಅವರ ಸೇವಾ ನಿವೃತ್ತಿಯಿಂದ ಕೆ-ರೇರಾದ ಹುದ್ದೆ ಖಾಲಿಯಾಗಿತ್ತು. ಇದನ್ನೀಗ ಸರ್ಕಾರ ಭರ್ತಿ ಮಾಡಿದೆ.

ಇತ್ತೀಚಿಗೆ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದ ರಾಕೇಶ್ ಸಿಂಗ್ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅದಕ್ಕೂ ಮುನ್ನ ಅವರು ಬಿಬಿಎಂಪಿ ಆಡಳಿತಾಧಿಕಾರಿ, ಬಿಡಿಎ ಆಯುಕ್ತ, ಕೆಎಂಎಫ್​ ಎಂಡಿ ಸೇರಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net