ಪ್ಯಾರಾ ವಿಶ್ವಕಪ್ ಶೂಟಿಂಗ್​ಗೆ ರಾಕೇಶ ನಿಡಗುಂದಿ ಆಯ್ಕೆ

New Shooting new
Published on

ಹುಬ್ಬಳ್ಳಿ : ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಪ್ಯಾರಾಶೂಟರ್ ರಾಕೆೇಶ ನಾಗಪ್ಪ ನಿಡಗುಂದಿ ಅವರು ಮೇ 28 ರಿಂದ ಜೂನ್ 6ರವರೆಗೆ ದಕ್ಷಿಣ ಕೋರಿಯಾದ ಚಾಂಗವಾನ್​ನಲ್ಲಿ ನಡೆಯಲಿರುವ ಡಬ್ಲ್ಯೂಎಸ್​ಪಿಎಸ್ ಪ್ಯಾರಾ ವಿಶ್ವಕಪ್ ಶೂಟಿಂಗ್ ಚಾಂಪಿಯನ್​ಶಿಪ್​ಗೆ ಆರ್ 1, 10ಮೀ ರೈಫಲ್ ಸ್ಟಾ್ಯಂಡಿಂಗ್ ಮೆನ್ ಎಸ್​ಎಚ್1ಬಿ ಕೆಟಗೆರಿಯಲ್ಲಿ ಆಯ್ಕೆಯಾಗಿದ್ದಾರೆ.

ರಾಕೇಶ ನಿಡಗುಂದಿ ಅವರು 2019 ರಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ 27 ಚಿನ್ನದ ಪದಕ ಪಡೆದಿದ್ದಾರೆ. ಅದರಲ್ಲಿ 11 ಚಿನ್ನ, ತಲಾ 8 ಬೆಳ್ಳಿ ಹಾಗೂ ಕಂಚಿನ ಪದಕಗಳು ಸೇರಿವೆ. ಪ್ಯಾರಾ ಖೇಲೊ ಇಂಡಿಯಾ ಕ್ರೀಡೆಯಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.

ಡಿಸೆಂಬರ್​ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯ ಅಂಕ, ಫೆಬ್ರವರಿಯಲ್ಲಿ ನಡೆದ ಟ್ರಾ್ಯವೆಲ್ಸ್ ಅಂಕ ಪರಿಗಣಿಸಿ, ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾದ ಆಯ್ಕೆ ಸಮಿತಿಯು ಈ ವಿಶ್ವಕಪ್​ಗೆ ಅವರನ್ನು ಆಯ್ಕೆ ಮಾಡಿದೆ.

ಈ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿ, ಪದಕ ಪಡೆಯುವಂತೆ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ ಸಂಸ್ಥಾಪಕ ಶಿವಾನಂದ ಬಾಲೆಹೊಸೂರ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net