ರಾಜ್ಯೋತ್ಸವ ಸಮಾರಂಭ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಎಂ.ಎಂ. ಹಿರೇಮಠ ಲೇಔಟ್​ನ ಗುರುಕೃಪ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನ. 17ರಂದು ಸಂಜೆ 4 ಗಂಟೆಗೆ ಗುರುಕೃಪ ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಯುವಬಲ ಜಾಗೃತಿ ಪರಿಷದ್​ ಅಧ್ಯಕ್ಷೆ ಪ್ರಾಚಿ ಗೌಡ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ವೈಜನಾಥ ಬಿರಾದಾರ, ಡಾ. ಭೀಮರಾಯ ಅವಟಿ ಆಗಮಿಸುವರು. ವಿಲಾಸ ನಾಂದೋಡ್ಕರ ಅವರಿಗೆ ಸನ್ಮಾನಿಸಲಾಗುವುದು. ಸಂಘದ ಅಧ್ಯಕ್ಷ ಎಂ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಕಲಾವಿದ ಅನಿಲ ಮೇತ್ರಿ ಹಾಗೂ ತಂಡದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net