ತಿ.ನರಸೀಪುರ ಪುರಸಭೆಯಲ್ಲಿ ರಾಜ್ಯೋತ್ಸವ ಆಚರಣೆ

ತಿ. ನರಸೀಪುರ ಪುರಸಭೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಲಾಯಿತು. ಬಿ.ವಸಂತಾ ಶ್ರೀಕಂಠ, ರಾಜೇಶ್ವರಿ ರಾಘವೇಂದ್ರ, ಬಿ.ಕೆ.ವಸಂತಕುಮಾರಿ, ಟಿ.ಎಂ. ನಂಜುಂಡಸ್ವಾಮಿ, ಸಿ.ಪ್ರಕಾಶ್, ಬಾದಾಮಿ ಮಂಜು, ಎಲ್.ಮಂಜುನಾಥ್ ಇತರರು ಇದ್ದರು.

Published on

ತಿ.ನರಸೀಪುರ: ಇಲ್ಲಿನ ಪುರಸಭೆ ಆವರಣದಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿಗೆ ಪೂಜೆ ಸಲ್ಲಿಸುವುದರೊಂದಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ಧ್ವಜಾರೋಹಣ ನೆರವೇರಿಸಲಾಯಿತು.

ಕನ್ನಡ ರಾಜ್ಯೋತ್ಸವದ ಹಿನ್ನೆಲೆ, ಏಕೀಕರಣ ಹೋರಾಟದ ಆರಂಭ ಸೇರಿದಂತೆ ಮೈಸೂರು ಸಂಸ್ಥಾನ ಕರ್ನಾಟಕವಾಗಿ ಉದಯಗೊಂಡ ಬಗ್ಗೆ ಪುರಸಭಾ ಸದಸ್ಯ ಎಲ್.ಮಂಜುನಾಥ್ ತಿಳಿಸಿಕೊಟ್ಟರು. ಮತ್ತೊಬ್ಬ ಸದಸ್ಯ ತುಂಬಲ ಸಿ.ಪ್ರಕಾಶ್ ಹಾಗೂ ಮಾಜಿ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ, ಹೋರಾಟದ ಹಿನ್ನೆಲೆ ಹಾಗೂ ಮಹತ್ವ ಕುರಿತು ಮಾತನಾಡಿದರು.

ಅಧ್ಯಕ್ಷ ಬಿ.ವಸಂತಾ ಶ್ರೀಕಂಠ, ಉಪಾಧ್ಯಕ್ಷೆ ರಾಜೇಶ್ವರಿ ರಾಘವೇಂದ್ರ, ಸದಸ್ಯರಾದ ಎಂ.ಸಿದ್ದು, ಅಹ್ಮದ್ ಸೈಯದ್, ಜಿ.ರೂಪಶ್ರೀ, ಆರ್.ತೇಜಶ್ವಿನಿ, ಮಂಜು ಬಾದಾಮಿ, ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಕುರುಬರ ಸಂಘದ ಕಾರ್ಯಾಧ್ಯಕ್ಷ ಪುಳ್ಳಾರಿ ಮಾದೇಶ್, ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ, ಕಚೇರಿ ವ್ಯವಸ್ಥಾಪಕ ಮಹೇಂದ್ರ, ಎಸ್‌ಡಿಎ ರಾಜೇಂದ್ರ ಪ್ರಸಾದ್, ರಾಜಸ್ವ ನಿರೀಕ್ಷಕ ಅಶೋಕ್, ಎಫ್‌ಡಿಎ ತ್ರಿವೇಣಿ, ಸಮುದಾಯ ಸಂಘಟಕ ಕೆ.ಮಹದೇವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net