

ಮುಂಡರಗಿ: ಪಟ್ಟಣದ ಜೆ.ಟಿ. ಮಠದ ಕ್ರಾಸ್‌ನಲ್ಲಿ ವಿಶ್ವ ಕನ್ನಡ ರಕ್ಷಣಾ ವೇದಿಕೆಯಿಂದ ಮಂಗಳವಾರ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಮಹಿಳಾ ಘಟಕದ ತಾಲೂಕು ಕಾರ್ಯಾಧ್ಯಕ್ಷೆ ಮಧುಮತಿ ಮಡಿವಾಳರ ಮಾತನಾಡಿ, ಕನ್ನಡದ ಉಳಿವು, ಬೆಳವಣಿಗೆಗಾಗಿ ಅನೇಕ ಮಹನೀಯರು ಶ್ರಮವಹಿಸಿದ್ದಾರೆ. ಕನ್ನಡಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದರು. ಶಾಲಾ ಮಕ್ಕಳು ನಾಡ ಗೀತೆ ಹಾಡಿದರು. ಧ್ವಜಾರೋಹಣದ ನಂತರ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಕೆ. ತಳಗಡೆ, ಶಿವಪ್ಪ ಉಕ್ಕಲಿ, ಈಶಪ್ಪ ಸಜ್ಜನ, ವಿ.ಎಸ್. ಗಟ್ಟಿ, ಬಾಬುಸಾಬ್ ಡಂಬಳ, ನಜೀರ್ ಹೊನ್ನಳ್ಳಿ, ರಾಜು ಹಾಳಗೇರಿ, ರಿಯಾಜ್ ಬಾಗಲಿ, ಯಲ್ಲಮ್ಮ ಗೌಡರ, ರಾಜೇಶ್ವರಿ ಪಾಟೀಲ, ಜಯಶ್ರೀ ಹುಯಿಲಗೋಳ, ರಂಜಿತಾ ಹಡಪದ ಇತರರಿದ್ದರು.