ಜ್ಞಾನ ಜ್ಯೋತಿ ಮಕ್ಕಳ ತಂಡದಿಂದ ರಾಜ್ಯೋತ್ಸವ

7ss2gramastaru makkalu
ಹಂಡ್ಲಿ ಗ್ರಾಪಂ ವ್ಯಾಪ್ತಿಯ ತಳಗೂರು ಗ್ರಾಮದ ಜ್ಞಾನ ಜ್ಯೋತಿ ಮಕ್ಕಳ ತಂಡದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
Published on

ಶನಿವಾರಸಂತೆ: ಸಮೀಪದ ಹಂಡ್ಲಿ ಗ್ರಾಪಂ ವ್ಯಾಪ್ತಿಯ ತಳಗೂರು ಗ್ರಾಮದ ಜ್ಞಾನ ಜ್ಯೋತಿ ಮಕ್ಕಳ ತಂಡ ವತಿಯಿಂದ ಗ್ರಾಮದ ಮಕ್ಕಳಿಂದ ಕನ್ನಡ ಭಾಷೆ, ಸಂಸ್ಕೃತಿ ಕುರಿತಾದ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಮುಂಭಾಗದಲ್ಲಿರುವ ಧ್ವಜಸ್ತಂಭದಲ್ಲಿ ಕನ್ನಡ ಧ್ವಜಾರೋಹಣವನ್ನು ಗ್ರಾಮದ ಹಿರಿಯರು ನೆರವೇರಿಸಿದರು.

ಶಾಲಾ ಆವರಣವನ್ನು ತಳಿರು ತೋರಣಗಳಿಂದ ಅಲಂಕರಿಸಿದ ಮಕ್ಕಳು, ಶಾಲಾ ಮುಂಭಾಗದಲ್ಲಿ ಹಳದಿ, ಕೆಂಪು ಬಣ್ಣದ ರಂಗೋಲಿಯಲ್ಲಿ ಕರ್ನಾಟಕದ ಭೂಪಟ ಬಿಡಿಸಿದರು. ನಂತರ ಭಾಷಣ, ಹಾಡು, ನೃತ್ಯ, ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು. ಹಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಉದಯ್‌ಕುಮಾರ್ ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net