

ಮಡಿಕೇರಿ:
ಕೊಡಗಿನ ಲೆ.ಜ. ಕೋದಂಡ ಪೂವಯ್ಯ ಕಾರ್ಯಪ್ಪ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಸಂಕೀರ್ಣ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಲೆ.ಜ. ಕೋದಂಡ ಪೂವಯ್ಯ ಕಾರ್ಯಪ್ಪ ಸೇನೆಯಲ್ಲಿ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವಿಶಿಷ್ಟ ಸೇವಾ ಮೆಡಲ್ ಹಾಗೂ ಸೇವಾ ಮೆಡಲ್ ಗೌರವವನ್ನೂ ಪಡೆದಿದ್ದಾರೆ. ಇದೀಗ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿ ಪಡೆದಿರುವ ಕೋದಂಡ ಕಾರ್ಯಪ್ಪ ನಿವೃತ್ತಿ ಬಳಿಕ ಮುಂಬಯಿನಲ್ಲಿ ನೆಲೆಸಿದ್ದಾರೆ.
ಇವರು ರಾಷ್ಟ್ರಪತಿ ಅವರಿಗೆ ಮಿಲಿಟರಿ ಕಾರ್ಯದರ್ಶಿ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಸೇನೆಯಲ್ಲಿ ಹೊಸದಾಗಿ ಸೃಜಿಸಲಾಗಿದ್ದ ಮಾಸ್ಟರ್ ಜನರಲ್ ಸಸ್ಟೇನ್ಸ್ (ಎಂಎಸ್‌ಜಿ)ಯೂ ಮೊದಲ ಬಾರಿಗೆ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು. ಕೋದಂಡ ಕಾರ್ಯಪ್ಪ ಮೂಲತಃ ಮಾದಾಪುರದ ಕುಂಬೂರಿನ ಕೋದಂಡ ಮನೆತನದವರು.
ಈ ಬಾರಿ ಕೊಡಗಿನ ಒಬ್ಬರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.