ಡಾ.ಸುಜಯ ಪಾಂಡ್ಯನ್‌ಗೆ ರಾಜ್ಯೋತ್ಸವ ಪ್ರಶಸ್ತಿ : ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಕರ್ನಾಟಕ ಘೋಷಣೆ

sujaya
Published on

ಕಾಸರಗೋಡು: ‘ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಕರ್ನಾಟಕ’ ಸಂಸ್ಥೆ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕಾಸರಗೋಡಿನ ಮನೋರೋಗ ತಜ್ಞೆ ಡಾ.ಸುಜಯ ಪಾಂಡ್ಯನ್ ಆಯ್ಕೆಯಾಗಿದ್ದಾರೆ. ಕಳೆದ 25 ವರ್ಷಗಳಿಂದ ಗಡಿನಾಡಿನಲ್ಲಿ ವೈದ್ಯೆಯಾಗಿ ಬಡಜನತೆಗೆ ನೀಡುತ್ತಿರುವ ನಿಸ್ವಾರ್ಥ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರು ಮೂಲತಃ ಪುತ್ತೂರು ನಿವಾಸಿ.

ಚಿಕಿತ್ಸೆಯಿಂದ ಗುಣಮುಖರಾಗಿರುವ ಅಸಹಾಯಕ ಮಾನಸಿಕ ಸಂತ್ರಸ್ತರನ್ನು ಜತೆ ಸೇರಿಸಿ ಸ್ವಉದ್ಯೋಗ ಒದಗಿಸುವ ಕನಸು ಡಾ.ಸುಜಯ ಪಾಂಡಿಯನ್ ಅವರದ್ದು. ಇದಕ್ಕಾಗಿ ಟ್ರಸ್ಟ್ ಒಂದನ್ನು ಸ್ಥಾಪಿಸುವ ಬಗ್ಗೆ ತಜ್ಞರ ಜತೆ ಮಾತುಕತೆ ನಡೆಸುತ್ತಿರುವ ಮಧ್ಯೆ ಪ್ರಶಸ್ತಿ ಬಂದಿದೆ. ನವಂಬರ್ 27ರಂದು ಬೆಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net