ಸಂಶೋಧಕ, ಹಿರಿಯ ಸಾಹಿತಿ ಡಿ.ಎನ್​. ಅಕ್ಕಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ

Akki
Published on

ಯಾದಗಿರಿ: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಗಿರಿಜಿಲ್ಲೆಯ ಹಿರಿಯ ಸಾಹಿತಿ, ಸಂಶೋಧಕ, ನಿವೃತ್ತ ಚಿತ್ರಕಲಾ ಶಿಕ್ಷಕ ಡಿ.ಎನ್.ಅಕ್ಕಿ ಭಾಜನರಾಗಿದ್ದಾರೆ.  ಸಾಹಿತ್ಯ ಕ್ಷೇತ್ರದಲ್ಲಿ ಅಕ್ಕಿ ಸಲ್ಲಿಸಿದ ಗಣನೀಯ ಸಾಧನೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.

ಮೂಲತಃ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಡಿ.ಎನ್.ಅಕ್ಕಿ ಅವರಿಗೆ 76 ವರ್ಷ. ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರು. ಮಣ್ಣಲ್ಲಿ ಅಡಗಿದ್ದ ಯಾದಗಿರಿ ಜಿಲ್ಲೆಯ ಪುರಾತನ ಗತ ವೈಭವಗಳನ್ನು ಹೊರತೆಗೆಯುವಲ್ಲಿ ಶ್ರಮಿಸಿದವರು.

ಈಗಲೂ ಸಹ ಸಂಶೋಧನೆಯನ್ನೇ ಜೀವನವನ್ನಾಗಿಸಿಕೊಂಡು, ಚಾಲುಕ್ಯ, ರಾಷ್ಟ್ರಕೂಟರಂಥ ರಾಜಮನೆತನಗಳ ಶಾಸನಗಳನ್ನು ತಮ್ಮ ಪುಸ್ತಕಗಳಲ್ಲಿ ಉಲ್ಲೇಖಿಸಿ, ನಾಡಿನ ಗತ ಇತಿಹಾಸವನ್ನು ಪರಿಚಯಿಸುವಲ್ಲಿ ಶ್ರಮಿಸುತ್ತಿದ್ದಾರೆ. ಸುಮಾರು 20 ಹೆಚ್ಚು ಸಂಶೋಧನಾ ಕೃತಿಗಳನ್ನು ಬರೆದಿದ್ದಾರೆ.

ಸಂಶೋಧನಾ ಗ್ರಂಥಗಳಾದ ಸಗರನಾಡ ಸಿರಿ, ಹೆಕ್ಕಲು ತೆನೆ, ಜೈನ ಪರಂಪರೆ ಅಕ್ಕಿಯವರು ಪ್ರಮುಖ ಕೃತಿಗಳು. 'ಬಾನರಂಗ' ಕಲಬುರಗಿ ಬಾನೂಲಿ ಕೇಂದ್ರದಲ್ಲಿ ಪ್ರಸಾರವಾದ ನಾಟಕ.  ರಾಷ್ಟ್ರಪತಿ ಪ್ರಶಸ್ತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಇವರ ಸಾಧನೆ ಗುರುತಿಸಿ ಗೌರವಿಸಿವೆ. ಅಕ್ಕಿ ಅವರನ್ನು ಈ ಬಾರಿ ರಾಜ್ಯ ಸರ್ಕಾರ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net