ಮಹಿಳೆಯರು ಸಾಹಿತ್ಯ,ಸಂಸ್ಕೃತಿ ಬೆಳೆಸಬೇಕು

web 4
Published on

ಚಿಕ್ಕಮಗಳೂರು: ಮಹಿಳೆಯರು ಸಾಹಿತ್ಯ, ಸಂಸ್ಕೃತಿ, ಧರ್ಮ, ಕಲೆ ಉಳಿಸಿ ಬೆಳೆಸುವತ್ತ ಶ್ರಮಿಸುವುದು ಅಗತ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮೋಹಿನಿ ಸಿದ್ದೇಗೌಡ ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಕಸ್ತೂರಿಬಾ ಸದನದಲ್ಲಿ ಆಡಳಿತಮಂಡಳಿ ಹಾಗೂ ಕೌಟುಂಬಿಕ ಸಲಹಾಕೇಂದ್ರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ನನಗೆ ಸಿಕ್ಕಿರುವ ಗೌರವ ಮತ್ತು ಪುರಸ್ಕಾರಗಳು ಮಹಿಳಾ ಸಹಕಾರಿಗಳಿಗೆ ಸೇರುತ್ತದೆ. ಇನ್ನಷ್ಟು ಹೆಚ್ಚಿನ ಸೇವಾ ಕಾರ್ಯಗಳಿಗೆ ಪ್ರೇರಣೆ ನೀಡುತ್ತದೆ ಎಂದರು.

ಸದನದ ಹಿರಿಯ ಸದಸ್ಯೆ ಗಿರಿಜಾ ರಾಮಸ್ವಾಮಿ ಮಾತನಾಡಿ, ನಿಸ್ವಾರ್ಥವಾಗಿ ಕರ್ಮದಲ್ಲಿ ತೊಡಗಿದ ಮೋಹಿನಿಸಿದ್ದೇಗೌಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವುದು ಮಹಿಳೆಯರ ಪರವಾದ ಸಂಘಟನೆ ಸೇವೆ-ಹೋರಾಟದ ಕಿರೀಟಕ್ಕೆ ಹೊನ್ನಗರಿ ಸೇರಿಸಿದಂತಾಗಿದೆ. ರಾಷ್ಟ್ರಸೇವಿಕಾ ಸಮಿತಿಯಲ್ಲಿ ಆತ್ಮಸ್ಥೈರ್ಯ, ಧೈರ್ಯ, ಶಕ್ತಿ ತುಂಬಿಸಿಕೊಂಡು ಅಲ್ಲಿಯ ವಿಚಾರಗಳನ್ನು ವಿವಿಧ ರಂಗಗಳಿಗೆ ಹಬ್ಬಿಸುವ ಕಾರ್ಯ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net