

ಕುಶಾಲನಗರ:
ಭಾಷೆಯ ಮೂಲಕ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕ ಹಾಗೂ ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯೋತ್ಸವ ಆಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತ ಆಗಬಾರದು. ನಾಡಿನ ಅಭಿವೃದ್ಧಿಗೆ ಪ್ರತಿಯೊಬ್ಬರೂ ಪಣತೊಡಬೇಕಾಗಿದೆ ಎಂದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ದೈಹಿಕ ಶಿಕ್ಷಣ ಶಿಕ್ಷಕ ಡಾ. ಸದಾಶಿವಯ್ಯ ಎಸ್.ಪಲ್ಲೇದ್ ಮಾತನಾಡಿ ಭಾಷೆ ಉಳಿವು ಮತ್ತು ಅಭಿವೃದ್ಧಿಯಲ್ಲಿ ಯು ಪೀಳಿಗೆಯ ಪಾತ್ರದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.
ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠದ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ. ಪಿ. ಚಂದ್ರಕಲಾ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್. ಎಂ. ರಘು ಕೋಟಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಾಲೇಜು ಪ್ರಾಂಶುಪಾಲ ನಾಗೇಶ್, ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲಿಪ್‌ವಾಸ್, ಉದ್ಯಮಿ ಬಿ. ಎಸ್. ಸದಾಶಿವ ಶೆಟ್ಟಿ, ಬರಮಣ್ಣ ಟಿ ಬೆಟಗೇರಿ, ಸÀರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಪುಷ್ಪ, ನಿವೃತ್ತ ಪ್ರಾಂಶುಪಾಲ ಭೋಜಣ್ಣ ರೆಡ್ಡಿ ಮತ್ತಿತರರು ಇದ್ದರು.
ಇದೆ ಸಂದರ್ಭ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಉದ್ಯಮಿ ಬಿ.ಎಸ್. ಸದಾಶಿವ ಶೆಟ್ಟಿ, ಉಪನ್ಯಾಸಕಿ ಬಿ. ಜಿ. ಶಾಂತಿ, ಸಮಾಜ ಸೇವಕರಾದ ಡಿ. ಆರ್. ಪ್ರಭಾಕರ್, ಆರ್. ಕಲಾಮಣಿ, ಶಾಂತ ಬಿ. ಬೆಟಗೇರಿ, ಎಂ. ಎ. ಮುಸ್ತಫ, ಶಿಕ್ಷಕಿ ಸಿ. ಎಸ್. ಜಾನಕಿ, ನಿವೃತ್ತ ಶಿಕ್ಷಕ ಎ, ಎಸ್. ತಮ್ಮಯ್ಯ, ಕರವೇ ಉಪಾಧ್ಯಕ್ಷ ಬಿ. ಎ. ದಿನೇಶ್, ಹೆಚ್. ಆರ್. ನಾಗೇಂದ್ರ, ಆಟೋ ಚಾಲಕಿ ಎಸ್ ಸುಜಾತ, ಕ್ರೀಡಾಪಟು ರಿಮೋನ್ ಪೊನ್ನಣ್ಣ, ಉದ್ಯಮಿ ಎನ್. ಓ. ಜೋಸೆಫ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.