ವಸತಿ ನಿಲಯಗಳಲ್ಲಿ ರಾಜ್ಯೋತ್ಸವ, ವಿಶೇಷ ಭೋಜನ ವ್ಯವಸ್ಥೆ

IMG_20241108_195804_551.jpg
Published on

ಹುಬ್ಬಳ್ಳಿ: ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ರ್ಪೂಣಗೊಂಡ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಗುರುವಾರ ರಾಜ್ಯದ ಎಲ್ಲ ವಸತಿ ನಿಲಯಗಳಲ್ಲಿ ರಾತ್ರಿ ವಿಶೇಷ ಭೋಜನ ವ್ಯವಸ್ಥೆ ಮಾಡಿತ್ತು.

ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ಪೂರ್ವ ಮತ್ತು ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳಿಗೆ ಮೈಸೂರ ಪಾಕ್, ಹೋಳಿಗೆ, ಪಲಾವ್, ವಾಂಗಿಬಾತ್, ಚಪಾತಿ, ಬೀನ್ಸ್ ಪಲ್ಯ, ಕೋಸಂಬ್ರಿ, ಅನ್ನ ಸಾಂಬಾರು, ಮಜ್ಜಿಗೆ ಮತ್ತು ಬಾಳೆ ಹಣ್ಣು ಹೀಗೆ ವೈವಿಧ್ಯ ಊಟ ಬಡಿಸಲಾಯಿತು.

ಕನ್ನಡ ನಾಡು ಮತ್ತು ಭಾಷೆಯ ಬಗ್ಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿ.ವಿ. ಕರವೀರಮಠ, ತಾಲೂಕು ವಿಸ್ತರಣಾಧಿಕಾರಿ ಸುರೇಶ ಗುರಣ್ಣವರ ಅವರು ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿ ವಿಶೇಷ ಭೋಜನ ವ್ಯವಸ್ಥೆಯ ಮೇಲುಸ್ತುವಾರಿ ನೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net