ಹುಬ್ಬಳ್ಳಿ: ಇಲ್ಲಿಯ ಚಿನ್ಮಯ ಇಂಗ್ಲಿಷ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
ಕನ್ನಡತಾಯಿ ಭುವನೇಶ್ವರಿದೇವಿಗೆ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಕ್ಕಳು ಕನ್ನಡ ಗೀತೆಗಳ ನೃತ್ಯ, ರೂಪಕ, ನಾಟಕ ಮತ್ತು ಕನ್ನಡಾಭಿಮಾನ ಸೂಸುವ ಭಾಷಣಗಳು, ಸೌಂಸ್ಕೃತಿಕ ಕಾರ್ಯಕ್ರಮಗಳನ್ನು ಸೊಗಸಾಗಿ ನೆರವೇರಿಸಿದರು.
ಅತಿಥಿಗಳಾಗಿದ್ದ ಶ್ರೀಶೈಲ ನೀಲಗುಂದ ಮಾತನಾಡಿ, ಕನ್ನಡದ ವೈಭವವನ್ನು ಉಳಿಸಿ ಬೆಳೆಸಿ ವಿಶ್ವದೆಲ್ಲೆಡೆ
ಇನ್ನಷ್ಟು ಪಸರಿಸುವಂತೆ ಮಾಡಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಎಲ್ಲರೂ ನಮ್ಮ ರಾಜ್ಯ, ಭಾಷೆ ಎಂಬ ಅಭಿಮಾನ ಹೊಂದಿದವರಾಗಿ ನಾಡಿನ ಉದ್ಧಾರಕ್ಕಾಗಿ ಚಿಂತನೆ ಹಾಗೂ ಸಾಧನೆ ಮಾಡಬೇಕೆಂದು ಹೇಳಿದರು.
ಸಂಗೀತಾ ಮಲ್ಲಣ್ಣವರ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ಮೂಲ್ಯ ಸ್ವಾಗತಿಸಿದರು. ರಜತ್ ತಗಡಿನಮನಿ ಹಾಗೂ ಅಂಕಿತಾ ಛಬ್ಬಿ ಕಾರ್ಯಕ್ರಮ ನಿರ್ವಹಿಸಿದರು. ಯೋಗೇಶ ಇಳಿಗೇರ ವಂದಿಸಿದರು.