ಜಿಲ್ಲೆಯ 4 ಸ್ಮಾರಕಗಳು ಸಂರಕ್ಷಿತ

dc office new
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಕಡೆಗಳಲ್ಲಿ ಸ್ಮಾರಕ ಹಾಗೂ ದೇವಾಲಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕವನ್ನಾಗಿ ಘೋಷಿಸಲಿದೆ.

ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪೂರು ಗ್ರಾಮದ ಗಂಗಾಶೈಲಿಯ ವೀರಗಲ್ಲು ಸ್ಮಾರಕ ಸೇರಿ ಹೊಸಕೋಟೆ ತಾಲೂಕಿನ ದೊಡ್ಡ ಹುಲ್ಲೂರು ಗ್ರಾಮದ ಶ್ರೀ ಸೋಮೇಶ್ವರ ದೇವಾಲಯ(ಈಶ್ವರ ದೇವಾಲಯ), ದೇವನಹಳ್ಳಿ ತಾಲೂಕಿನ ನಲ್ಲೂರು ಗ್ರಾಮದ ಶ್ರೀ ಚೆನ್ನಕೇಶವ ದೇವಾಲಯ, ಕಸಬಾ ಹೋಬಳಿಯ ಖಾಸ್ಬಾಗ್ ಗ್ರಾಮದ ಶ್ರೀ ಮಹದೇಶ್ವರ ದೇವಾಲಯಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕವನ್ನಾಗಿ ಘೋಷಿಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.

ಇತಿಹಾಸ ಸಂರಕ್ಷಣೆ: ಐತಿಹಾಸಿಕ ಮತ್ತು ವಾಸ್ತುಶಿಲ್ಪ ಮಹತ್ವದ ಪುರಾತನ ಕಟ್ಟಡಗಳನ್ನು ಸುಸ್ಥಿತಿಯಲ್ಲಿ ಸಂರಕ್ಷಿಸುವುದರಿಂದ ನಾಡಿನ ಇತಿಹಾಸ ಮತ್ತು ಸಂಸ್ಕೃತಿನ್ನು ಚಿರಸ್ಮರಣಿಯವಾಗಿರುವುದು ಇದರ ಮೂಲ ಉದ್ದೇಶವಾಗಿದೆ. ನಾಡಿನ ಅರಸರು ಬಿಟ್ಟು ಹೋಗಿರುವ ಐತಿಹಾಸಿಕ ಸಂಪತ್ತನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಮೂಲ ಉದ್ದೇಶದಿಂದ ಸಂರಕ್ಷಿತ ಸ್ಮಾರಕಗಳನ್ನಾಗಿ ೋಷಣೆ ಮಾಡಲಿದೆ. ಸರ್ಕಾರದೊಂದಿಗೆ ಆಸಕ್ತ ಖಾಸಗಿ ಸಂಸ್ಥೆಗಳು ಸ್ಮಾರಕಗಳ ಸಂರಕ್ಷಣೆಗಾಗಿ ಸ್ಥಳೀಯ ಸಹಕಾರದೊಂದಿಗೆ ಸ್ಮಾರಕಗಳ ಸಂರಕ್ಷಣೆಯ ಭಾಗವಾಗಲು ಅವಕಾಶವಿದೆ.

24 ಗಡುವು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈ ಸ್ಮಾರಕಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕ ಪ್ರದೇಶವೆಂದು ಘೋಷಿಸುವುದರಿಂದ ಭಾಧಿತರಾಗುವವರು ಇದೇ ಡಿ.24ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದ್ದಾರೆ. ಸ್ಮಾರಕಗಳ ೋಷಣೆ ಬಳಿಕ ಇಲ್ಲಿನ ಉತ್ಖನನ ಸೇರಿ ಯಾವುದೇ ಸರ್ಕಾರದ ಚಟುವಟಿಕೆೆಗಳಿಗೆ ಸ್ಥಳೀಯರಿಂದ ಆಕ್ಷೇಪಣೆ ಬರುವಂತಿಲ್ಲ. ಈ ಹಿನ್ನೆಲೆಯಲ್ಲಿ ದೇವಸ್ಥಾನ, ಸ್ಕಾರಕಗಳ ಸುತ್ತಮುತ್ತಲಿನ ಖಾಸಗಿ ವ್ಯಕ್ತಿಗಳ ಆಕ್ಷೇಪಣೆಗೆ ಕಾಲವಕಾಶ ನೀಡಲಾಗಿದೆ.

ಎಲ್ಲಿಗೆ ಸಲ್ಲಿಸಬೇಕು: ಬೆಂಗಳೂರು ವಿಕಾಸಸೌಧದಲ್ಲಿನ ಪ್ರವಾಸೋದ್ಯಮ ಇಲಾಖೆ ಸರ್ಕಾರದ ಕಾರ್ಯದರ್ಶಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ.ಎನ್.ಶಿವಶಂಕರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net