

ಮೂಡಲಗಿ: ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ಯುಗದಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡುವುದು ಅಗತ್ಯವಾಗಿದೆ. ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ನೀರಾವರಿ ಮಹತ್ವ ಪಡೆದಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಬೆಳಗಾವಿ ಕರ್ನಾಟಕ ನೀರಾವರಿ ನಿಗಮ ವಿಭಾಗದ ಸಹಯೋಗದೊಂದಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಎಲ್‌ಬಿಸಿ ಕಾಲುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರೈತರ ಸಮಗ್ರ ಅಭಿವೃದ್ಧಿಗಾಗಿ ಕೃಷಿ ವಲಯಕ್ಕೆ ಒತ್ತು ನೀಡಲಾಗಿದೆ. ನೀರಾವರಿ ಇಲಾಖೆಯಿಂದ 50 ಲಕ್ಷ ರೂ. ವಿಶೇಷ ಅನುದಾನದಲ್ಲಿ ಕಲ್ಲೋಳಿ ಪಟ್ಟಣದ ಸಿದ್ಧಾರೂಢ ಮಹಾದ್ವಾರದ ಪಕ್ಕದಲ್ಲಿರುವ ಘಟಪ್ರಭಾ ಎಡದಂಡೆ ಕಾಲುವೆ ಜಾಲದಡಿಯಲ್ಲಿ ಬರುವ ಕಾಲುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಈರಣ್ಣ ಕಡಾಡಿ ಹೇಳಿದರು.
ಭೀಮಶೆಪ್ಪ ಖಾನಾಪುರ, ಬಸವರಾಜ ಬೆಳಕೂಡ, ವಸಂತ ತಹಸೀಲ್ದಾರ್, ಬಸವರಾಜ ಜಗದಾಳಿ, ಮಹಾದೇವ ಖಾನಾಪುರ, ಮಹಾದೇವ ಮದಭಾವಿ, ಸಂಗಪ್ಪ ತುಪ್ಪದ, ಅರ್ಜುನ ಚಿಕ್ಕೋಡಿ, ಗಿರಿಮಲ್ಲಪ್ಪ ಸವಸುದ್ಧಿ, ಗುತ್ತಿಗೆದಾರ ಈರಣ್ಣ ವಾಲಿ, ಈರಣ್ಣ ಮುನ್ನೋಳಿಮಠ, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.