

ಬೆಂಗಳೂರು: ಪಂಚತಂತ್ರ ಬರೆದಿರುವ ಕಾಲದಲ್ಲಿ ಸ್ತ್ರೀಯರನ್ನು ಹೀನಾಯವಾಗಿ ನೋಡಲಾಗುತ್ತಿತ್ತು. ಸಾಕಷ್ಟು ಕಥೆಗಳಲ್ಲಿ ಸ್ತ್ರೀಯರನ್ನು ವಾಸ್ತವಕ್ಕಿಂತ ಭಿನ್ನವಾಗಿ ಚಿತ್ರಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯೆ ಡಾ. ಸುಧಾಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಸದಾತನ ಬೆಂಗಳೂರು, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ಪಂಚತಂತ್ರ' ಮತ್ತು "ಹಿತೋಪದೇಶ' ಕನ್ನಡ ಅನುವಾದ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾಜಕ್ಕೆ ಮಾದರಿಯಾಗುವ ಸಿಯರು ಎಲ್ಲ ಕಾಲದಲ್ಲಿಯೂ ಇದ್ದಾರೆ. ಆದ್ದರಿಂದ, ಅನುವಾದ ಮಾಡುವಾಗ ಕೆಲವು ಸಂದರ್ಭಗಳನ್ನು ಕೈಬಿಡುವುದು ಒಳ್ಳೆಯದು. ಇದು ಮಕ್ಕಳಿಗೆ ನೀಡುವ ಪುಸ್ತಕವಾಗಿರುವ ಹಿನ್ನೆಲೆಯಲ್ಲಿ ಮುಗ್ಧ ಮನಸ್ಸುಗಳ ಮೇಲೆ ಪರಿಣಾಮ ಬೀರಬಹುದು. ಅವರಿಗೆ ಧನಾತ್ಮಕ ಅಂಶಗಳನ್ನು, ಜೀವನವನ್ನು ಪ್ರೀತಿಸುವ ಅಂಶಗಳನ್ನೇ ನೀಡಬೇಕು. ಈ ಪುಸ್ತಕಗಳು ಇಂಗ್ಲಿಷ್ ಭಾಷೆಗೂ ಬಂದರೆ ಇನ್ನೂ ಹೆಚ್ಚು ಜನಪ್ರಿಯವಾಗಬಹುದು ಎಂದರು.
ವಿದ್ವಾಂಸ ಜಗದೀಶಶರ್ಮಾ ಸಂಪ ಮಾತನಾಡಿ, ಮಹಾಭಾರತವನ್ನು ಓದುವಾಗ ಕಥೆಗಳಿಂದ ಕೆಲವೊಮ್ಮೆ ರಸಭಂಗವಾಗುತ್ತದೆ. ಆದರೆ, ಈ ಕಥೆಗಳಿಂದ ಓದುಗರ ಮನಸ್ಸಿನ ಮೇಲೆ ದೀರ್ ಪರಿಣಾಮವನ್ನೂ ಉಂಟುಮಾಡುವುದರಿಂದ ಹಿರಿಯರು ಕಥೆಗಳ ಮೂಲಕವೇ ಬದುಕನ್ನು ಹೆಣೆದರು. ಪ್ರಾಚಿನ ಭಾರತದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಯಾವುದೇ ಪ್ರತ್ಯೇಕ ಪುಸ್ತಕಗಳಿರಲಿಲ್ಲ. ಆದರೆ, ಆ ಕಾಲದ ಎಲ್ಲ ಪುಸ್ತಕಗಳು ವ್ಯಕ್ತಿತ್ವ ವಿಕಸನದ ಅಂಶಗಳನ್ನೇ ಹೊಂದಿವೆ. ಇಲ್ಲಿ ಕಥೆಗಳನ್ನು ಹೇಳುತ್ತಲೇ ಬದುಕಿನ ಸೂತ್ರಗಳನ್ನು ಮನವರಿಕೆ ಮಾಡಿ ಕೊಡಲಾಗಿದೆ ಎಂದರು.
ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ, ಲೇಖಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಕಾಲೇಜಿನ ಪ್ರಾಂಶುಪಾಲ ಡಾ.ಭೀಮಶಾ ಆರ್ಯ, ಸೇರಿ ಮತ್ತಿತರರಿದ್ದರು.