ರಾಜ ವಿದ್ಯಾಶ್ರಮದ ಮಹಾಶಿವರಾತ್ರಿ ಉತ್ಸವ ಅಧ್ಯಕ್ಷರಾಗಿ ದೊಡ್ಡವಾಡ ಆಯ್ಕೆ

IMG-20250215-WA0029.jpg
Published on

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಸ್ವಾಮಿ ಮಠದ ಹತ್ತಿರದಲ್ಲಿರುವ ರಾಜವಿದ್ಯಾಶ್ರಮದ ಮಹಾ ಶಿವರಾತ್ರಿ ಉತ್ಸವದ ಅಧ್ಯಕ್ಷರಾಗಿ ರಾಷ್ಟ್ರೀಯ ಬಸವದಳದ ಮಹಾಸಂಘಟನಾ ಕಾರ್ಯದರ್ಶಿ ಗಂಗಾಧರ ದೊಡವಾಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಫೆಬ್ರುವರಿ 25ರಿಂದ ಎರಡು ದಿನಗಳ ಕಾಲ ಮಹಾತ್ಮರ ಉಪನ್ಯಾಸಗಳು,  ವಿಚಾರಿ ಸಂಕಿರಣಗಳ, ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಉತ್ಸವ ಸಮಿತಿಯ ಉಪಾಧ್ಯಕ್ಷ ಚಿಕ್ಕಯ್ಯ ಸಾಲಿಮಠ ತಿಳಿಸಿದ್ದಾರೆ.

ಶ್ರೀಮಠದಲ್ಲಿ ನಡೆದ ಸಭೆಯಲ್ಲಿ ಭರತ ಭೂಷಣ ಷಡಕ್ಷರಿ ಅಪ್ಪಗಳ ಸಾನ್ನಿಧ್ಯದಲ್ಲಿ ಆಯ್ಕೆ ಘೋಷಿಸಲಾಯಿತು.

ಶಿವಬಸವ ಗಚ್ಚಿನವರ, ವಿರುಪಾಕ್ಷಪ್ಪ ಕಳ್ಳಿಮನಿ, ಅನಿಲ್ ದೇಶಪಾಂಡೆ, ಬಸವಕುಮಾರ ತಲವಾಯಿ, ಡಾ. ಸುರೇಶ ಹೊರಕೇರ, ಉದಯಕುಮಾರ ಅಂಬಿಗೇರ, ಅಕ್ಕಮಹಾದೇವಿ ಬಾಗೇವಾಡಿ, ವಂದನಾ ಕರಾಳೆ, ಬಾಳಮ್ಮ ಜಂಗಿನವರ, ವಿರೂಪಾಕ್ಷಯ್ಯ ಜಂಗಿನಮಠ, ವರದಾಶಂಕರ ಹಿರೇಮಠ, ತೇಜಸ್ವಿನಿ ಬೆಂಗಳೂರು, ಅಕ್ಕಮ್ಮ ಕಂಬಳಿ, ಲಕ್ಷ್ಮೀ ಬಿಜ್ಜರಗಿ, ಮಂಗಲಾ ತಿಪ್ಪಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net