

ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆ, ಬುಡಾದಲ್ಲಿನ ಭ್ರಷ್ಟಾಚಾರ ಕುರಿತು ಲೋಕಾಯುಕ್ತದಲ್ಲಿ ಕೇಸ್ ದಾಖಲಾಗಿದ್ದು, ಭ್ರಷ್ಟಾಚಾರ ವಿರುದ್ದ ಹೋರಾಟಕ್ಕೆ ಮೊದಲ ಜಯ ಸಿಕ್ಕದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ರಾಜಕುಮಾರ ಟೋಪಣ್ಣವರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಯ ಮೂಲ ಯೋಜನೆಯನ್ನು ಬಿಜೆಪಿ ನಾಯಕರು ಬದಲಾಯಿಸಿಕೊಂಡು ತಮ್ಮ ವೈಯಕ್ತಿಕ ಅನುಕೂಲಕ್ಕೆ ತಕ್ಕಂತೆ ಅವೈಜ್ಞಾನಿಕ ಕಾಮಗಾರಿ ನಟಿಸಿದ್ದಾರೆ. ಅಲ್ಲದೆ ವ್ಯಾಕ್ಸಿನ್ ಡಿಪೋ ದಲ್ಲಿ ನೂರಾರು ಮರಗಳ ಕಡಿದು ಕಾಮಗಾರಿ ಕೈಗೊಂಡಿದ್ದಾರೆ. ಇದೀಗ ಸ್ಮಾರ್ಟ್ ಸಿಟಿ ಮೂವರು ಎಂಡಿಗಳ ವಿರುದ್ಧ ಆರೋಗ್ಯ ಇಲಾಖೆ ದೂರು ದಾಖಲಿಸಿದೆ. ಅಲ್ಲದೆ, ಬುಡಾದಲ್ಲಿ ನಿಯಮ ಉಲ್ಲಂಘನೆ ನಿವೇಶನ ಮಾರಾಟ,ಭ್ರಷ್ಟಾಚಾರ ಕುರಿತು ಬುಡಾ ಆಯುಕ್ತ ವಿರುದ್ಧ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿ ಕೊಂಡಿದ್ದಾರೆ. ಇದೆಲ್ಲಾನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು ಎಂದರು.
ಬಿಜೆಪಿ ಸರ್ಕಾರದ ಅಧಿಕಾರದ ಅವಧಿಯಲ್ಲಿ ಶಾಸಕರು, ಸಂಸದರ ಮಾತು ಕೇಳಿಕೊಂಡು ಬೇಕಾಬಿಟ್ಟ ಕೆಲಸ ಮಾಡಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಆಗುತ್ತದೆ. ನಮ್ಮ ಭ್ರಷ್ಟಾಚಾರ ವಿರುದ್ಧ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಗಡುಗಿದರು.