ರಾಜು ತಾಂಡೇಲ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆ

Chittakula GP
Published on

ಕಾರವಾರ: ಚಿತ್ತಾಕುಲಾ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ನ ರಾಜು ತಾಂಡೇಲ ಎರಡನೇ ಬಾರಿಗೆ ಆಯ್ಕೆಯಾದರು.

ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರೂ ಆಗಿರುವ ಅವರು, ಚಿತ್ತಾಕುಲಾ ಗ್ರಾಪಂನ ಸೀಬರ್ಡ್ ಪುನರ್ವಸತಿ ಕೇಂದ್ರದಿಂದ ಆಯ್ಕೆಯಾದ ಸದಸ್ಯರಾಗಿದ್ದಾರೆ.

ಶುಕ್ರವಾರ ಅವರು 19 ಮತ ಪಡೆದು ಜಯಗಳಿಸಿದರು. ಉಪಾಧ್ಯಕ್ಷರಾಗಿ ಬಿಜೆಪಿಯ ಸೂರಜ್ ದೇಸಾಯಿ ಆಯ್ಕೆಯಾದರು. ಇದುವರೆಗೆ ಚಿತ್ತಾಕುಲಾ‌ ಬಿಜೆಪಿ ಆಡಳಿತದಲ್ಲಿತ್ತು. ಹಾಲಿ ಉಪಾಧ್ಯಕ್ಷರಾದ ಸ್ವಾತಿ ಸೂರಜ್ ದೇಸಾಯಿ ಅಧ್ಯಕ್ಷರಾಗಿದ್ದರು.

ಚಿತ್ತಾಕುಲಾ ಒಟ್ಟು 36 ಸದಸ್ಯರನ್ನು ಹೊಂದಿದ ಜಿಲ್ಲೆಯ ಅತಿ ದೊಡ್ಡ ಗ್ರಾಪಂ ಆಗಿದೆ. 12 ಕ್ಕೂ ಅಧಿಕ ಬಹು ಮಹಡಿ ಕಟ್ಟಡಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net