

ದೊಡ್ಡಬಳ್ಳಾಪುರ : ಡಾ.ರಾಜಕುಮಾರ್ ಅವರ ನಾಡು, ನುಡಿಯ ಪ್ರೀತಿ ಅನನ್ಯವಾದದ್ದು. ಐತಿಹಾಸಿಕ ಪಾತ್ರಗಳ ಮೂಲಕ ಕರ್ನಾಟಕ ಇತಿಹಾಸದ ವೈಭವ ಮರುಸೃಷ್ಟಿ ಮಾಡಿದ ಏಕೈಕ ನಟ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಟಕದ ಕೋಶಾಧ್ಯಕ್ಷ ಜಿ.ಸುರೇಶ್ ತಿಳಿಸಿದರು.
ತಾಲೂಕು ಕಸಾಪ ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ರಾಜ್ಕುಮಾರ್ ಜನ್ಮದಿನಾಚರಣೆ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಅಭಿಮಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜಕುಮಾರ್ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಕನ್ನಡಿಗರಲ್ಲಿ ಕನ್ನಡ ಪ್ರೆ ಎಚ್ಚರಿಸಿರುವುದನ್ನು ಕನ್ನಡಿಗರು ಎಂದು ಮರೆಯುವುದಿಲ್ಲ. ಸರಳ, ಸಜ್ಜನ, ನಿಷ್ಠಾವಂತ, ಪ್ರಾಮಾಣಿಕ, ಅಪ್ರತಿಮ ಕಲಾವಿದ ಎಂದು ಎಲ್ಲ ಜನರ ಪ್ರೀತಿಗೆ ಪಾತ್ರರಾದ ರಾಜಕುಮಾರ್ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದರು.
ರಾಜಕುಮಾರ್ ಅವರು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನೀಡಲಾಗುವ ಅತ್ಯುನ್ನತ ಗೌರವ ಕೆಂಟುಕಿ ಕರ್ನಲ್ಪ್ರಶಸ್ತಿ ಪಡೆದ ಏಕೈಕ ಭಾರತೀಯ ನಟರಾಗಿದ್ದಾರೆ. ಡಾ.ರಾಜಕುಮಾರ್ ತನಗೆ ಪ್ರೀತಿ, ಯಶಸ್ಸು ಹಾಗೂ ಬದುಕು ಕೊಟ್ಟ ಕನ್ನಡ ಭಾಷೆ ಮತ್ತು ಸಂಸತಿಗೆ ಸ್ಮರಣೀಯ ಕಾಣಿಕೆ ನೀಡಿದ್ದಾರೆ. ರಾಜ್ಕುಮಾರ್ ಅವರ ವೈಯಕ್ತಿಕ ಮತ್ತು ವೃತ್ತಿಪರ ರಂಗಗಳಲ್ಲಿ ಅವರ ಅತ್ಯಂತ ಶಿಸ್ತುಬದ್ಧ ಮತ್ತು ಸರಳ ಜೀವನಶೈಲಿಯನ್ನು ಎಲ್ಲರೂ ಗೌರವಪೂರ್ವಕವಾಗಿ ಸ್ಮರಿಸುತ್ತಾರೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಮಾಜಿ ಅಧ್ಯೆ ಪ್ರಮೀಳಾ ಮಹಾದೇವ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಸಂಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಕಸಬಾ ಹೋಬಳಿ ಟಕದ ಅಧ್ಯಕ್ಷ ದಾದಾಪೀರ್, ಪ್ರತಿನಿಧಿ ನಾಗರತ್ನಮ್ಮ, ಷಫೀರ್, ಕನ್ನಡ ಜಾಗೃತ ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜು, ಕಲಾವಿದರಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ರಾಮಕೃಷ್ಣ ಇದ್ದರು.