ಅಪ್ರತಿಮ ಕಲಾ ಸಾರ್ವಭೌಮ ರಾಜ್ ಕುಮಾರ್

puspa
.Rajkumar Birthday Celebration
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಡಾ.ರಾಜ್‌ಕುಮಾರ್ ಅವರು ನಾಡಿನ ಕೋಟ್ಯಂತರ ಕನ್ನಡಿಗರ ಮನದಾಳದಲ್ಲಿ ಅಚ್ಚಳಿಯದೆ ಉಳಿದಿರುವ ಅಪ್ರತಿಮ ಕಲಾ ಸಾರ್ವಭೌಮರಾಗಿದ್ದಾರೆ ಎಂದು ಸಾಹಿತಿ ಮಣ್ಣೆಮೋಹನ್ ತಿಳಿಸಿದರು.
ನಗರದ ಸದಾಶಿವನಗರ ರಂಗಶಿಕ್ಷಣ ಕೇಂದ್ರ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಂಗಶಿಕ್ಷಣ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ವರನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ನಟ ಸಾರ್ವಭೌಮ, ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಅವರು ಸಮಾಜದ ಎಲ್ಲ ವರ್ಗದ ಜನರ ಮನಸ್ಸಿನಲ್ಲಿಯೂ ನೆಲೆಸಿರುವ ಮೇರುನಟ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಗೋಕಾಕ್ ಚಳುವಳಿಯಲ್ಲಿ ರಾಜ್ ಅವರ ಬೆಂಬಲ ಕನ್ನಡ ಪ್ರೇಮಿಗಳಲ್ಲಿ ಸಂಚಲನ ಮೂಡಿಸಿತು. ರಾಜ್‌ಕುಮಾರ್ ಅವರು ಎಲ್ಲ ಪಾತ್ರಗಳಲ್ಲಿಯೂ ಅತ್ಯುತ್ತಮವಾಗಿ ನಟಿಸುತ್ತಿದ್ದರು. ಅವರ ಅನೇಕ ಚಿತ್ರಗಳನ್ನು ಸಮಾಜಕ್ಕೆ ಸಾಕಷ್ಟು ಮಾದರಿಯಾಗಿದೆ ಎಂದರು.
ಕಸಾಪ ಅಧ್ಯಕ್ಷ ಬಿ.ಪ್ರಕಾಶ್‌ಮೂರ್ತಿ ಮಾತನಾಡಿ, ನಾಡಿನಲ್ಲಿ ಡಾ.ರಾಜ್‌ಕುಮಾರ್ ಗೊತ್ತಿಲ್ಲದವರು ಯಾರೂ ಇಲ್ಲ. ಪ್ರತಿಯೊಬ್ಬರಿಗೂ ಚಿರಪರಿಚಿತರಾಗಿದ್ದಾರೆ. ಅವರ ನಟನೆಯ ಚಿತ್ರಗಳನ್ನು ಮಕ್ಕಳಿಗೆ ತೊರಿಸಿ, ಆ ಚಿತ್ರಗಳಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು. ಡಾ.ರಾಜ್‌ಕುಮಾರ್ ಅವರು ನಟಿಸಿರುವ ಪ್ರತಿ ಚಲನಚಿತ್ರದಲ್ಲಿ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ತನ್ಮಯತೆ, ಶ್ರದ್ಧೆಯಿಂದ ಧನಾತ್ಮಕವಾಗಿ ಅಭಿನಯಿಸುತ್ತಿದ್ದರಿಂದ ಅವರು ಪಾತ್ರಕ್ಕೆ ತಕ್ಕಂತೆ ಮನೋಜ್ಞವಾಗಿ ನಟನೆ ಮಾಡುತ್ತಿದ್ದರು. ಅವರು ದೈಹಿಕವಾಗಿ ನಮ್ಮೊಂದಿಗೆ ದೂರವಾಗಿ ವರ್ಷಗಳೇ ಕಳೆದರೂ ಅವರ ಚಿತ್ರರಂಗಕ್ಕೆ ಹಾಗೂ ಸಮಾಜಕ್ಕೆ ನೀಡಿದ್ದ ಕೊಡುಗೆ ಜೀವಂತವಾಗಿವೆ ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ್‌ಕುಮಾರ್, ರಂಗಶಿಕ್ಷಣ ಕೇಂದ್ರ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಸಿದ್ದರಾಜು, ಪುರಸಭೆ ಮಾಜಿ ಅಧ್ಯಕ್ಷ ಉಮಾಶಂಕರ್, ತಾಲೂಕು ಕಲಾವಿದರ ಬಳಗದ ಅಧ್ಯಕ್ಷ ಡಾ.ಜಿ.ಗಂಗರಾಜು, ಸಾಹಿತಿ ಡಾ.ಚೌಡಯ್ಯ, ಬೋಗಣ್ಣ, ಡಾ.ಶಿವಲಿಂಗಯ್ಯ, ನಿವೃತ್ತ ಮುಖ್ಯಶಿಕ್ಷಕ ವಿ.ರಾಜಣ್ಣ, ಛಾಯಚಿತ್ರ ಗ್ರಾಹಕರ ಸಂಘದ ಪ್ರಧಾನ ಕಾರ್ಯದರ್ಶಿ ರಂಗನಾಥ್, ಕಲಾವಿದರಾದ ಚಿಕ್ಕಮಾರನಹಳ್ಳಿ ದಿನೇಶ್, ಬೂದಿಹಾಳ್ ಕಿಟ್ಟಿ, ಡೊಡ್ಡರಾಮಯ್ಯ, ರಂಗನಾಥ್, ಜ್ಯೋರ್ತಿಲಿಂಗಪ್ಪ, ನರಸಿಂಹಮೂರ್ತಿ, ರಾಮಕೃಷ್ಣಪ್ಪ, ಜೀವನ್, ಕಿರಣ್, ಕೀತಿ, ಭವ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net