ತಾಂತ್ರಿಕ ಕ್ಷೇತ್ರದ ಅಭಿವೃದ್ಧಿಗೆ ರಾಜೀವಗಾಂಧಿ ಕೊಡುಗೆ ಅಪಾರ

21 ron 1
ರೋಣದ ಕೆಎಸ್‌ಎಸ್ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ರಾಜೀವಗಾಂಧಿ ಜನ್ಮದಿನ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
Published on

ರೋಣ: ಅಂಧಕಾರದಲ್ಲಿದ್ದ ಭಾರತಕ್ಕೆ ತಮ್ಮ ದೃಢ ಸಂಕಲ್ಪದಿಂದ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಅವರ ಕೊಡುಗೆ ಅಪಾರವಾಗಿದೆ ಎಂದು ಕೆಎಸ್‌ಎಸ್ ಮಹಾವಿದ್ಯಾಲಯ ಪ್ರಾಚಾರ್ಯ ಸಿ.ಬಿ. ಪೋಲಿಸ್‌ಪಾಟೀಲ ಹೇಳಿದರು.

ಪಟ್ಟಣದ ಕನಕದಾಸ ಶಿಕ್ಷಣ ಸಮಿತಿ ಗದಗ, ಕೆಎಸ್‌ಎಸ್ ಮಹಾವಿದ್ಯಾಲಯ ರೋಣ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಪಟ್ಟಣದ ಕೆಎಸ್‌ಎಸ್ ಮಹಾವಿದ್ಯಾಲಯದಲ್ಲಿ ರಾಜೀವಗಾಂಧಿ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆ ಉದ್ದೇಶಿಸಿ ಅವರು ಮಾತನಾಡಿದರು.

ಎನ್‌ಎಸ್‌ಎನ್ ಕಾರ್ಯಕ್ರಮ ಅಧಿಕಾರಿ ಡಾ. ಎಸ್.ಆರ್. ನದಾಫ್ ಪ್ರತಿಜ್ಞಾ ವಿಧಿ ಬೋಧಿಸಿದರು. ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯೆ ಎ.ಎಸ್. ನಾಯ್ಕರ ಉಪನ್ಯಾಸಕರಾದ ಎಸ್.ಬಿ. ಶಿರಗುಂಪಿ, ಎಂ.ಎಸ್. ದಳವಾಯಿ, ಎಂ.ವೈ. ಕಿತ್ತಲಿ, ಎಂ.ಎಚ್. ನಾಯ್ಕರ, ಎಲ್.ಕೆ. ಚಂದೂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net