ರಾಜೀವ್ ಗಾಂಧಿ, ದೇವರಾಜ ಅರಸ್ ಎಲ್ಲರಿಗೂ ಮಾದರಿ

20 ckm 1
ಚಿಕ್ಕಮಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸ್ ಜಯಂತಿ ಆಚರಿಸಲಾಯಿತು. ಗಾಯತ್ರಿ ಶಾಂತೇಗೌಡ, ಎಂ.ಸಿ.ಶಿವಾನAದ ಸ್ವಾಮಿ, ಪುಟ್ಟೇಗೌಡ, ಎಚ್.ಪಿ.ಮಂಜೇಗೌಡ, ತನೋಜ್ ಕುಮಾರ್, ಪರಮೇಶ್ ರಾಜ್ ಅರಸ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ದೇಶದ ಯುವಜನರ ಭವಿಷ್ಯದ ಕಲ್ಪನೆ ಹಾಗೂ ಭರವಸೆಗಳನ್ನು ಮನಗಂಡು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ದೇಶದ ಭವಿಷ್ಯವನ್ನು ರೂಪಿಸಿದ ಮಹಾನ್ ನಾಯಕ. ಉಳುವವರಿಗೆ ಭೂಮಿ ಕೊಡಿಸುವ ಮಹಾನ್ ಸಾಧನೆಯನ್ನು ಮಾಡಿದ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ನಮಗೆಲ್ಲ ಮಾದರಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ತಿಳಿಸಿದರು.

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದಿಂದ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸ್ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಈ ಮಹಾನ್ ನಾಯಕರು ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳು ಇಂದು ಶಾಶ್ವತವಾಗಿ ನೆಲೆಯೂರಿವೆ. ರಾಜೀವ್ ಗಾಂಧಿ ಹಾಗೂ ಡಿ.ದೇವರಾಜ ಅರಸು ಜನ್ಮ ದಿನವಾದ ಇಂದು ಅವರುಗಳು ರಾಜ್ಯ ಮತ್ತು ದೇಶಕ್ಕಾಗಿ ಕೊಟ್ಟಿರುವ ಕೊಡುಗೆಯನ್ನು ನೆನಪು ಮಾಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ ಮಾತನಾಡಿ, ರಾಜೀವ್ ಗಾಂಧಿ ಅವರ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಮೀಸಲಾತಿಗಳಿಂದ ಬಹುತೇಕರಿಗೆ ಅಧಿಕಾರ ದೊರೆಯುವಂತಾಗಿದೆ ಎಂದರು.
ತಾAತ್ರಿಕ ಜಗತ್ತಿನಲ್ಲಿ ಪ್ರಪಂಚಕ್ಕೆ ಸವಾಲು ಎಂಬAತೆ ನಮ್ಮ ದೇಶವನ್ನು ರೂಪಿಸಿದ ರಾಜೀವ್ ಗಾಂಧಿ ಅವರನ್ನು ಈ ದೇಶದ ಜನ ಮರೆಯಬಾರದು. ಹಾಗೇಯೇ ದೇವರಾಜ ಅರಸು ಕೂಡ ಜನಪರವಾದ ದಿಟ್ಟ ಆಡಳಿತವನ್ನು ನೀಡುವ ಜೊತೆಗೆ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ದ ಮಹಾನ್ ನಾಯಕ ಎಂದು ಬಣ್ಣಿಸಿದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಹಾಗೂ ವಕೀಲರಾದ ಡಿ.ಸಿ.ಪುಟ್ಟೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜೀವ್ ಗಾಂಧಿಯವರು ನವ ಭಾರತದ ಬಗ್ಗೆ ರಚನಾತ್ಮಕ ದೂರದೃಷ್ಟಿ ಹೊಂದಿದ್ದರು. ಅವರ ಆಡಳಿತಾವಧಿಯಲ್ಲಿ ತೆಗೆದುಕೊಂಡ ಕ್ರಾಂತಿಕಾರಿ ನಿಲುವುಗಳು ಇಂದಿನ ಡಿಜಿಟಲ್ ಯುಗಕ್ಕೆ ಭದ್ರ ಬುನಾದಿ ಹಾಕಿವೆ ಎಂದು ಹೇಳಿದರು.
ಅಪ್ರತಿಮ ರಾಜಕಾರಣಿ ಭೂಸುಧಾರಣೆ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ ಡಿ.ದೇವರಾಜ್ ಅರಸ್ ಹಾಗೂ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಪ್ರತಿಪಾದಿಸಿದ ಸಾಮಾಜಿಕ. ಧಾರ್ಮಿಕ, ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು ಎಂದು ತಿಳಿಸಿದರು.
ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಕುಮಾರ್, ನಗರಸಭೆ ಸದಸ್ಯ ಪರಮೇಶ್ ರಾಜ್ ಅರಸ್, ಮುಖಂಡರಾದ ಎನ್.ಡಿ.ಚಂದ್ರಪ್ಪ, ಶಿವರಾಂ, ಮಲ್ಲೇಶ್, ಬಸವರಾಜು, ಪ್ರಸಾದ್ ಅಮಿನ್, ಯಶೋಧಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net