ರಾಜೀವ್‌ಗಾಂಧಿ, ಅರಸು ಕೊಡುಗೆ ಅಪಾರ

vvvv
ವಿಜಯಪುರ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಜನ್ಮದಿನವನ್ನು ಆಚರಿಸಲಾಯಿತು. ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಮುಖಂಡರಾದ ಅಬ್ದುಲ್ ಚಾಂದಸಾಬ ಗಡಗಲಾವ, ವಿದ್ಯಾರಾಣಿ ತುಂಗಳ, ಜಮೀರಅಹ್ಮದ ಬಕ್ಷಿ, ಆರತಿ ಶಹಾಪುರ ಮತ್ತಿತರರಿದ್ದರು.
Published on

ವಿಜಯಪುರ : ಮಾಜಿ ಪ್ರಧಾನಿ ದಿ. ರಾಜೀವ್‌ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರ ಎಂದು ಈ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜೀವ್ ಗಾಂಧಿ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ದೇಶದ ಪ್ರಧಾನಿಯಾಗಿ ಇಡೀ ಜಗತ್ತು ಭಾರತದ ಕಡೆಗೆ ನೋಡುವಂತೆ ಮಾಡಿದವರು. ಯುವಕರಿಗೆ 18ನೇ ವರ್ಷ ವಯಸ್ಸಿನಲ್ಲಿ ಮತದಾನ ಮಾಡುವ ಹಕ್ಕನ್ನು ನೀಡಿದರು. ಪಂಚಾಯತ ರಾಜ್ ವ್ಯವಸ್ಥೆ, ಮಹಿಳೆಯರಿಗೆ ಶೇ.50 ಮೀಸಲಾತಿ ಜಾರಿಗೆ ತಂದು ಮಹಿಳೆಯರಿಗೆ ಸ್ಥಾನಮಾನ ನೀಡಿ ಸ್ವಾವಲಂಬಿ ಬದುಕು ಸಾಗಿಸಲು ಅನುವು ಮಾಡಿಕೊಟ್ಟವರು ರಾಜೀವ್ ಗಾಂಧಿ ಅವರು. ಇಡೀ ದೇಶದಲ್ಲಿ ಕಂಪ್ಯೂಟರೀಕರಣಕ್ಕೆ ಒತ್ತುಕೊಟ್ಟು ದೇಶವನ್ನು 21ನೇ ಶತಮಾನಕ್ಕೆ ಕೊಂಡೊಯ್ಯಲು ಕಾರಣೀಭೂತರಾದವರು. ಅದರಂತೆ ಅನೇಕ ಜನಪರ ಕಾರ್ಯಗಳನ್ನು ಕೈಗೆತ್ತಿಕೊಂಡು ಜನಪ್ರಿಯ ಪ್ರಧಾನಿಯಾಗಿ ಪ್ರತಿಯೊಬ್ಬರ ಮನಸ್ಸಿನಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದರು.

ಅದರಂತೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಬಡವರ, ದೀನದಲಿತರ, ಹಿಂದುಳಿದ ವರ್ಗದವರ, ರೈತರ ಕಲ್ಯಾಣಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಕರ್ನಾಟಕ ರಾಜ್ಯಕೆ ನೀಡಿರುವುದನ್ನು ಜನ ಇಂದಿಗೂ ಅವರನ್ನು ಸ್ಮರಿಸುವಂತಾಗಿದೆ. ಅವರೊಬ್ಬ ಜನಪರ ನಾಯಕರಾಗಿ ಮಿಂಚಿದವರು. ಈ ಇಬ್ಬರೂ ಧೀಮಂತ ನಾಯಕರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆದು ಈ ದೇಶಕ್ಕಾಗಿ, ರಾಜ್ಯಕ್ಕಾಗಿ ನಮ್ಮದೆಯಾದ ಕೊಡುಗೆ ನೀಡೋಣ ಎಂದು ಹೇಳಿದರು.

ಮುಖಂಡರಾದ ಚಾಂದಸಾಬ ಗಡಗಲಾವ, ವಿದ್ಯಾರಾಣಿ ತುಂಗಳ, ಜಮೀರಅಹ್ಮದ ಬಕ್ಷಿ, ಆರತಿ ಶಹಾಪುರ, ವಿಜಯಕುಮಾರ ಘಾಟಗೆ, ವಸಂತ ಹೊನಮೊಡೆ, ಶಬ್ಬೀರ ಜಾಗೀರದಾರ, ಮಲ್ಲಿಕಾರ್ಜುನ ಪರಸನ್ನವರ, ನಿಂಗಪ್ಪ ಸಂಗಾಪುರ, ಇಲಿಯಾಸ ಸಿದ್ದಿಕಿ, ಲಕ್ಷ್ಮೀ ಕ್ಷೀರಸಾಗರ, ಬಿ.ಎಸ್.ಗಸ್ತಿ, ಕೆ.ಬಿ. ಲೋಣಿ, ತಾಜುದ್ದೀನ ಖಲೀಾ, ಎಸ್.ಎನ್.ಮಾಳಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net