ಬಂಡೀಪುರದಲ್ಲಿ ರಜನಿಕಾಂತ್!

rajani
Published on

ಮೈಸೂರು: ದಕ್ಷಿಣ ಭಾರತದ ಖ್ಯಾತ ನಟ, ಸೂಪರ್ ಸ್ಟಾರ್ ರಜನಿಕಾಂತ್ ಸೋಮವಾರ ಬೆಳಗ್ಗೆ ಚೆನ್ನೈನಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದ ವಿಮಾನ ದಟ್ಟ ಮಂಜಿನ ಕಾರಣದಿಂದ ಒಂದೂವರೆ ಗಂಟೆ ವಿಳಂಬವಾಗಿ ಲ್ಯಾಂಡಿಂಗ್ ಆಗಿದೆ.

ರಜನಿಕಾಂತ್ ಬೆಳಗ್ಗೆ 6.50ಕ್ಕೆ ಚೆನ್ನೈನಿಂದ ಮೈಸೂರಿಗೆ ಖಾಸಗಿ ವಿಮಾನದ ಮೂಲಕ ಹೊರಟಿದ್ದರು. ಈ ವಿಮಾನ ಬೆಳಗ್ಗೆ 8.10ಕ್ಕೆ ಮೈಸೂರು ತಲುಪಬೇಕಾಗಿತ್ತು. ಆದರೆ, ಮೈಸೂರು ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ, ಮುಂಜಾಗ್ರತಾ ಕ್ರಮವಾಗಿ ವಿಮಾನದ ಲ್ಯಾಂಡಿಂಗ್ ವಿಳಂಬ ಮಾಡಲು ಸೂಚಿಸಲಾಯಿತು. ಈ ಹಿನ್ನೆಲೆಯಲ್ಲಿ ನಟ ರಜನಿಕಾಂತ್, ಸಹ ಪ್ರಯಾಣಿಕರ ಜತೆ ವಿಮಾನದಲ್ಲೇ ಒಂದೂವರೆ ಗಂಟೆ ಕಾಲ ಕಳೆಯಬೇಕಾಯಿತು.

ಕಡೆಗೆ ವಿಮಾನ ನಿಲ್ದಾಣದ ತಾಂತ್ರಿಕ ಸಿಬ್ಬಂದಿ ಸೂಚನೆ ಸಿಕ್ಕ ಕೂಡಲೇ 9.30ರ ಸುಮಾರಿಗೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಬಳಿಕ ರಜನಿಕಾಂತ್ ನೇರವಾಗಿ ಬಂಡೀಪುರಕ್ಕೆ ಪಯಣ ಬೆಳೆಸಿದ್ದಾರೆ. ಇನ್ನು ಎರಡು ದಿನಗಳ ಕಾಲ ಬಂಡೀಪುರದಲ್ಲೇ ಉಳಿಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net